ಮೈಸೂರು(ಡಿ.18): ಆಗಸದಲ್ಲಿ ಹಾರಾಡಲು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ. ಜೀವನದಲ್ಲಿ ಒಮ್ಮೆಯಾದರೂ ಅಂತಹ ಅವಕಾಶ ಸಿಗಲಿ ಎಂಬುದು ಪ್ರತಿಯೊಬ್ಬರು ಆಶಿಸುವುದು ಸಹಜ. ಈಗ ಆಕಾಶದಲ್ಲಿ ಹಾರಾಡುವ ಸುವರ್ಣ ಅವಕಾಶವೊಂದು ಒದಗಿ ಬಂದಿದೆ. ಅದು ಎಲ್ಲಿ, ಹೇಗೆ ಸಾಧ್ಯ ಎನ್ನುವ ಕುತೂಹಲನಾ ಈ ಸ್ಟೋರಿ ನೋಡಿ.

ಸಾಂಸ್ಕೃತಿಕ ನಗರಿ  ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಹೂ ಡೈವ್ಸ್ ಲೈವ್ಸ್ ಎಂಬ ಘೋಷಣೆಯೊಂದಿಗೆ ಎರಡು ತಿಂಗಳುಗಳ ಕಾಲ ಈ ಸಾಹಸಮಯ ಕಾರ್ಯಕ್ರಮ ನಡೆಯಲಿದೆ. ಜಂಪ್ ಮಾಡಲು ಸೂಕ್ತ ವಾತಾವರಣವಿದೆ ಎನ್ನುವ ದೃಷ್ಟಿಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ದೆಹಲಿಯ ಸ್ಕೈಡೈವಿಂಗ್ ಸಂಸ್ಥೆ  ಈ  ಕಾರ್ಯಕ್ರಮ  ಆಯೋಜಿಸಿದೆ.

ಅಯ್ಯೋ ಏನಾಗುತ್ತೋ ಏನೋ ಅನ್ನೋ ಭಯಬೇಡ. ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.  ಇದರಲ್ಲಿ ಭಾಗವಹಿಸಲು ಒಬ್ಬರಿಗೆ 35ಸಾವಿರ ರೂಪಾಯಿ ತಗುಲುತ್ತದೆ. ಇನ್ನೂ ಸ್ಕೈಡೈವಿಂಗ್​​'ನಲ್ಲಿ ಭಾಗಿಯಾದ ಸಮಾಜಕಲ್ಯಾಣ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಕೂಡ ಸಂತಸ ವ್ಯಕ್ತಪಡಿಸಿದರು.

ವಿಮಾನದಿಂದ ಸುಮಾರು 15 ಸಾವಿರ ಅಡಿ ಎತ್ತರದಿಂದ ಪ್ಯಾರಾಚೂಟ್ ಕಟ್ಟಿಕೊಂಡು ಭೂಮಿಗೆ ಜಿಗಿಯುವ ಸಾಹಸ ಇದು.. ಹೀಗಾಗೇ ಸ್ಕೈಡೈವಿಂಗ್ ನಲ್ಲಿ ಪಾಲ್ಗೊಳ್ಳಲು 18 ವರ್ಷ ಮೇಲ್ಪಟ್ಟಿರಬೇಕು.

ಒಟ್ಟಾರೆ ಅರಮನೆ ನಗರಿ ಮೈಸೂರಿನಲ್ಲಿ ಸ್ಡೈ ಡೈವಿಂಗ್ ಹವಾ ಜೋರಾಗಿಯೇ ಇದೆ. ಆಗಸದಲ್ಲಿ ನಡೆಯುವ ಸ್ಕೈಡೈವಿಂಗ್​ ಸಾಹಸಕ್ಕೆ ಉತ್ಸಾಹಿ ಯುವಕರು ಸಿದ್ಧರಾಗಬೇಕಷ್ಟೇ.