Asianet Suvarna News Asianet Suvarna News

ಕಾಂಗ್ರೆಸ್ ಮುಖಂಡನ ಹತ್ಯೆಗೆ ಬಿಗ್ ಸ್ಕೆಚ್

ಕಾಂಗ್ರೆಸ್ ಮುಖಂಡರೋರ್ವರ ಹತ್ಯೆಗೆ ಬಿಗ್ ಸ್ಕೆಚ್ ಹಾಕಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಅವರನ್ನು ಶನಿವಾರ ತಡರಾತ್ರಿ ದುಷ್ಕರ್ಮಿ ಗಳು ಹತ್ಯೆ ಮಾಡಲು ನಡೆಸಿದ ಘಟನೆ ನಡೆದಿದೆ. 

Sketch To Murder Congress Leader
Author
Bengaluru, First Published Jul 30, 2018, 10:45 AM IST

ಬೆಳಗಾವಿ :  ಜಿಲ್ಲೆಯ ಸವದತ್ತಿ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಅವರನ್ನು ಶನಿವಾರ ತಡರಾತ್ರಿ ದುಷ್ಕರ್ಮಿ ಗಳು ಹತ್ಯೆ ಮಾಡಲು ನಡೆಸಿದ ಘಟನೆ ಸವದತ್ತಿ ಪಟ್ಟಣದಲ್ಲಿ ನಡೆದಿದೆ. ಮೊದಲಿಗೆ ಇದೊಂದು ಅಪ ಘಾತ ಎಂದು ಭಾವಿಸಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಕುಟುಂಬದವರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಹತ್ಯೆ ಯತ್ನ ನಡೆದಿರುವುದಕ್ಕೆ ಪುರಾವೆಯಾಗಿ ಕೆಲವೊಂದು ವಸ್ತುಗಳು ಪತ್ತೆಯಾಗಿವೆ.

ಶನಿವಾರ ರಾತ್ರಿ ಆನಂದ ಚೋಪ್ರಾ ಬೈಕ್‌ನಲ್ಲಿ ಗುರ್ಲಹೊಸೂರಿನಲ್ಲಿ ಇರುವ ತಮ್ಮ ಸ್ನೇಹಿತರ ಮನೆಗೆ ಹೋಗಿ ಮರಳಿ ಸವದತ್ತಿ ಪಟ್ಟಣದಲ್ಲಿರುವ ತಮ್ಮ ಮನೆಗೆ ಮರಳುವಾಗ ಘಟನೆ ನಡೆದಿದೆ. ರಸ್ತೆ ಪಕ್ಕ ವಾಹನ ಬಿದ್ದಿರುವುದನ್ನು ಗಮನಿಸಿದ ಪ್ರಯಾಣಿಕರು ಚೋಪ್ರಾ ಅವರನ್ನು ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾನುವಾರ ಬೆಳಿಗ್ಗೆ ಸ್ಥಳದಲ್ಲಿ ಸಿಕ್ಕ ಖಾರದ ಪುಡಿ, ರಾಡಿನಿಂದಾಗಿ ಇದೊಂದು ಹತ್ಯೆ ಯತ್ನ ಎಂದು ದೂರು ನೀಡಲಾಗಿದೆ.

ಮುಂಜಾಗ್ರತೆ ಕ್ರಮವಾಗಿ 300 ಕ್ಕೂ ಹೆಚ್ಚು ಪೊಲೀಸ್  ಸಿಬ್ಬಂದಿಯನ್ನು ಸವದತ್ತಿ ಪಟ್ಟಣದಲ್ಲಿ ನಿಯೋಜನೆ ಮಾಡಲಾಗಿದೆ. ಘಟನೆ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಆನಂದ ಚೋಪ್ರಾ ಸಹೋದರ ಸಚಿನ್ ಚೋಪ್ರಾ ದೂರು ನೀಡಿದ್ದಾರೆ. 

2 ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ: ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ 2013 ಮತ್ತು 2018 ರಲ್ಲಿ ವಿಧಾನಸಭೆ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ನೀಡಿದ್ದರೂ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಬಂಡಾಯವಾಗಿ ಸ್ಪರ್ಧಿಸಿದ್ದರು. ಎರಡೂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್ ಮಾಮನಿ ವಿರುದ್ಧ ಸೋತಿದ್ದಾರೆ. 2018 ರ ಚುನಾವಣೆಯಲ್ಲಿ ಆರಂಭಿಕ ಹಂತದಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮವಾಗಿ ಚೋಪ್ರಾ 6 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ. 

Follow Us:
Download App:
  • android
  • ios