ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕಳೆದ ಒಂದು ತಿಂಗಳಿಂದ ನಿರಂತರವಾಗಿ ತನಿಖೆ ನಡೆಸುತ್ತಿರುವ ಎಸ್​ಐಟಿ ಗೌರಿ ಹಂತಕರ ಬಂಧನಕ್ಕೆ ಸಜ್ಜಾಗಿದೆ. ಕೊಲೆ ಮಾಡಿದವರಾರು..? ಎಷ್ಟು ಜನ ಕೊಲೆ ನಡೆದ ದಿನ ಬೆಂಗಳೂರಿಗೆ ಬಂದಿದ್ರು..? ಅನ್ನುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು, ಹಂತಕರ ಬಂಧನಕ್ಕೆ ಬಲೆ ಬೀಸಿದೆ.

ಬೆಂಗಳೂರು(ಅ.10): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕಳೆದ ಒಂದು ತಿಂಗಳಿಂದ ನಿರಂತರವಾಗಿ ತನಿಖೆ ನಡೆಸುತ್ತಿರುವ ಎಸ್​ಐಟಿ ಗೌರಿ ಹಂತಕರ ಬಂಧನಕ್ಕೆ ಸಜ್ಜಾಗಿದೆ. ಕೊಲೆ ಮಾಡಿದವರಾರು..? ಎಷ್ಟು ಜನ ಕೊಲೆ ನಡೆದ ದಿನ ಬೆಂಗಳೂರಿಗೆ ಬಂದಿದ್ರು..? ಅನ್ನುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು, ಹಂತಕರ ಬಂಧನಕ್ಕೆ ಬಲೆ ಬೀಸಿದೆ.

'ಕರ್ನಾಟಕದಲ್ಲೇ ಹಂತಕರು ಬೀಡು ಬಿಟ್ಟಿದ್ದಾರೆ ಅಥವಾ ಹೊರ ರಾಜ್ಯದಲ್ಲಿ ತಂಗಿದ್ದಾರಾ...? ಅನ್ನುವ ಮಾಹಿತಿಯಷ್ಟೇ ಎಸ್'​ಐಟಿಗೆ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ಹುಡುಕಾಟಕ್ಕಾಗಿ ವಿವಿಧ ತಂಡಗಳಾಗಿ ಹಂತಕರ ಬಂಧನಕ್ಕೆ ಮುಂದಾಗಿದ್ದು, ಬಂದಿಸುವ ವಿಶ್ವಾಸದಲ್ಲಿದೆ.