ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳ ತನಿಖೆ ಚುರುಕುಗೊಂಡಿದೆ.
ಬೆಂಗಳೂರು (ಸೆ.25): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳ ತನಿಖೆ ಚುರುಕುಗೊಂಡಿದೆ.
ಸ್ಥಳೀಯ ರೌಡಿಗಳು ಗೌರಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯಲ್ಲಿ ಇಂದು ಜೈಲಿನಲ್ಲಿರೋ ಹಾಲಿ ರೌಡಿ ಟಿಬೇಟ್ ಬಾಲಾಜಿ ಮತ್ತು ಸಹಚರರನ್ನ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಗೌರಿ ಹತ್ಯೆಯಾದ ದಿನದಂದು ರೌಡಿ ಟಿಬೇಟ್ ಬಾಲಾಜಿ ಸಹಚರರ ಮೊಬೈಲ್ ನೆಟ್ವರ್ಕ್ ಆರ್ ಆರ್ ನಗರ ಮತ್ತು ಹೆಬ್ಬಾಳ ದ ಸುತ್ತಮುತ್ತ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗೌರಿ ಹತ್ಯೆಯಲ್ಲಿ ಟಿಬೇಟ್ ಬಾಲಾಜಿ ಮತ್ತು ಸಹಚರರ ಕೈವಾಡವೇನಾದರೂ ಇದೆಯಾ ಎಂದು ಶಂಕಿಸಿ ಎಸ್ಐಟಿ ಅಧಿಕಾರಿಗಳು ಬಾಲಾಜಿ ಮತ್ತು ಸಹಚರರನ್ನ ವಿಚಾರಣೆ ಮಾಡಿದ್ದಾರೆ.
