ಶಾರ್ಪ್​ ಶೂಟರ್​ ಬಗ್ಗೆ ಮಾಹಿತಿಯನ್ನು ಎಸ್​ಐಟಿ ಕಲೆ ಹಾಕುತ್ತಿದೆ. ಮುಂಬೈ, ಆಂಧ್ರ, ಕರ್ನಾಟಕದಲ್ಲಿರುವ ಶಾರ್ಪ್​ ಶೂಟರ್​ಗಳ ಬಗ್ಗೆ ಮಾಹಿತಿ ಪಡೆಯುತ್ತಿದೆ. ಈಗಾಗಲೇ ಹಲವು ಶಾರ್ಪ್​ಶೂಟರ್​ಗಳನ್ನು ವಿಚಾರಣೆ ನಡೆಸಿದೆ.

ಬೆಂಗಳೂರು(ಸೆ.18): ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ರೌಡಿ ಮುಲಾಮ ಸೇರಿ ಹಲವು ಪಾತಕಿಗಳ ವಿಚಾರಣೆ ನಡೆಸಲಾಗಿದೆ.

ಇನ್ನು ಕೆಲವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ.ಗೌರಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ್ದ ಎಲ್ಲ ರೌಡಿಗಳನ್ನು ವಿಚಾರಣೆ ನಡೆಸಲಾಗಿದೆ. ಅಲ್ಲದೆ ಪ್ರಕರಣದ ತನಿಖೆಯನ್ನು ಎಸ್​ಐಟಿ ತಂಡ ಮತ್ತಷ್ಟು ಚುರುಕುಗೊಳಿಸಿದೆ.

ಗೌರಿ ಹತ್ಯೆ ಶಾರ್ಪ್ ಶೂಟರ್​ಗಳಿಂದಲೇ ಆಗಿದೆ ಎಂದು ಶಂಕೆ ವ್ಯಕ್ತಪಡಿಸಿ, ಶಾರ್ಪ್​ ಶೂಟರ್​ ಬಗ್ಗೆ ಮಾಹಿತಿಯನ್ನು ಎಸ್​ಐಟಿ ಕಲೆ ಹಾಕುತ್ತಿದೆ. ಮುಂಬೈ, ಆಂಧ್ರ, ಕರ್ನಾಟಕದಲ್ಲಿರುವ ಶಾರ್ಪ್​ ಶೂಟರ್​ಗಳ ಬಗ್ಗೆ ಮಾಹಿತಿ ಪಡೆಯುತ್ತಿದೆ. ಈಗಾಗಲೇ ಹಲವು ಶಾರ್ಪ್​ಶೂಟರ್​ಗಳನ್ನು ವಿಚಾರಣೆ ನಡೆಸಿದೆ. ಈ ಹಿಂದೆ ಎಸ್​ಐಟಿ ತಂಡ ವಿಜಯಪುರದಲ್ಲೂ ಕಂಟ್ರಿ ಪಿಸ್ತೂಲ್​ ಸಂಬಂಧಿಸಿದಂತೆ ಹಲವರ ವಿಚಾರಣೆ ನಡೆಸಿತ್ತು. ಜತೆಗೆ ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ ಜೈಲುಗಳಿಗೆ ಭೇಟಿ ಪ್ರಮುಖ ಖೈದಿಗಳನ್ನು ವಿಚಾರಣೆ ನಡೆಸಿದ್ದಾರೆ. ಮಾಹಿತಿ ಆಧರಿಸಿ ತಮಿಳುನಾಡಿನ ರಾಮೇಶ್ವರಂಗೆ ತೆರಳಿದ ಎಸ್​ಐಟಿ ತಂಡ ನಾನಾ ಮಾಹಿತಿ ಕಲೆಹಾಕುತ್ತಿದೆ.