ನವದೆಹಲಿ[ಆ.05]: ಪುಟ್ಟ ಮಗುವೊಂದು ತನ್ನ ತಮ್ಮನನ್ನು ಬಹುದೊಡ್ಡ ಅಪಾಯದಿಂದ ಕಾಪಾಡಿ, ಆತನನ್ನು ರಕ್ಷಿಸಿದ್ದಾಳೆ. ಸದ್ಯ ಆ ಪುಟ್ಟ ಅಕ್ಕನ ಸಾಹಸಭರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಅಗುತ್ತಿದೆ. 

ಹೌದು ಅಕ್ಕನೊಂದಿಗೆ ಲಿಫ್ಟ್ ಒಳಗೆ ಬಂದಿದ್ದ ತಮ್ಮನ ಕುತ್ತಿಗೆಯಲ್ಲಿ ಹಗ್ಗವೊಂದಿತ್ತು. ದುರಾದೃಷ್ಟವಶಾತ್ ಈ ಹಗ್ಗದ ಮತ್ತೊಂದು ಬಾಗಿಲು ಮುಚ್ಚಿಕೊಳ್ಳುವುದಕ್ಕೂ ಮೊದಲೇ ಹೊರಬದಿಯಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಲಿಫ್ಟ್ ಚಲಿಸಲು ಆರಂಭಿಸಿದ ಮರುಕ್ಷಣವೇ ಬಾಲಕ ಹಗ್ಗದಲ್ಲಿ ನೇತಾಡಲಾರಂಭಿಸಿದ್ದಾನೆ. ತಮ್ಮನ ನರಳಾಟ ಗಮನಿಸಿದ ಅಕ್ಕ ಕೂಡಲೇ ಲಿಫ್ಟ್ ನಲ್ಲಿದ್ದ ಎಮರ್ಜನ್ಸಿ ಬಟನ್ ಒತ್ತಿದ್ದಾಳೆ ಹಾಗೂ ತಮ್ಮನನ್ನು ಎತ್ತಿ ಹಿಡಿದಿದ್ದಾಳೆ. ಹೀಗಾಗಿ ಕುತ್ತಿಗೆಗೆ ಬಿಗಿದುಕೊಂಡಿದ್ದ ಹಗ್ಗ ಸಡಿಲಗೊಂಡಿದೆ. ಕೂಡಲೇ ತಮ್ಮನನ್ನು ಕೆಳಗಿಳಿಸಿ ಆರೈಕೆ ಮಾಡಿದ್ದಾಳೆ. 

ಸದ್ಯ ತಮ್ಮನ ಪ್ರಾಣ ಕಾಪಾಡಿದ ಈ ದಿಟ್ಟ ಅಕ್ಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಕಿಯ ಸಮಯಪ್ರಜ್ಞೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.