ದಂಧೆಕೋರರ ಪರ ನಿಂತ ಮೇಲಾಧಿಕಾರಿಗೆ ಅವಾಜ್ ಹಾಕಿದ್ದ ‘ಸಿಂಗಂ’ ಸಸ್ಪೆಂಡ್

Singham Styled PSI of Devanahalli  Suspended
Highlights

  • ದಂಧೆಕೋರರ ಪರನಿಂತ ಸಿಪಿಐಗೆ ಅವಾಜ್ ಹಾಕಿದ್ದ ಪಿಎಸ್ಐ ಶ್ರೀನಿವಾಸ್
  • ಮೇಲಾಧಿಕಾರಿಗೆ ಚಳಿ ಬಿಡಿಸಿದ್ದ ಪಿಎಸ್ಐ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್

 

ಬೆಂಗಳೂರು:  ದಂಧೆಕೋರರ ಪರ ನಿಂತ ಮೇಲಾಧಿಕಾರಿಗೆ  ‘ಸಿಂಗಂ’ ಶೈಲಿಯಲ್ಲಿ ಅವಾಜ್ ಹಾಕಿದ್ದ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣೆ ಪಿಎಸ್ಐ ಅಮಾನತು ಮಾಡಲಾಗಿದೆ.

ಪರವಾನಿಗೆಯಿಲ್ಲದೆ ಗ್ರಾನೈಟ್ ಸಾಗಿಸುತ್ತಿದ್ದ ಲಾರಿಯನ್ನು ಮುಟ್ಟುಗೋಲು ಹಾಕುವ ವಿಚಾರದಲ್ಲಿ ಸಿಪಿಐ ಜೊತೆ ವಾಗ್ವಾದ ನಡೆಸಿದ್ದ ಪಿಎಸ್ಐ ಶ್ರೀನಿವಾಸ್ ಇದೀಗ ಅಮಾನತು ಆಗಿದ್ದಾರೆ.

"

ಪಿಎಸ್ಐ ಶ್ರೀನಿವಾಸ್ ಅಮಾನತ್ತು ಮಾಡಿ ಬೆಂಗಳೂರು ಗ್ರಾಮಾಂತರ ಎಸ್ಪಿ ಬೀಮಾಶಂಕರ್ ಗುಳೇದ್ ಆದೇಶ ಹೊರಡಿಸಿದ್ದಾರೆ.ಲಾರಿ ಮಾಲೀಕರ ಪರ ಮಾತನಾಡಿದಕ್ಕೆ ಆಕ್ರೋಶಗೊಂಡು ಕಳೆದ ಭಾನುವಾರ ಶ್ರೀನಿವಾಸ್ ಮೇಲಾಧಿಕಾರಿಗೆ ಚಳಿ ಬಿಡಿಸಿದ್ದರು. 

ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದ ಪಿಎಸ್ಐ ಅವಾಜ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿ,  ಸಾರ್ವಜನಿಕರಿಂದ ಪಿಎಸ್ಐ ಕಾರ್ಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. 

loader