ರಿಯಾಲಿಟಿ ಶೋನಲ್ಲಿ ಲಿಪ್ ಟು ಲಿಪ್ ಕಿಸ್ ಕೊಟ್ಟ ಖ್ಯಾತ ಗಾಯಕ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೊ

First Published 23, Feb 2018, 5:55 PM IST
Singer Papon Caught On Facebook Broadcast Kissing Reality Show Contestant
Highlights

ವಾಯ್ಸ್  ಆಫ್ ಇಂಡಿಯಾ ಕಿಡ್ಸ್  ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರುವ ಪ್ಯಾಪೊನ್ ಅದೇ ಶೋನಲ್ಲಿ ಬಾಲಕಿಯೊಬ್ಬಳ ಮುಖಕ್ಕೆ ಬಣ್ಣ ಹಚ್ಚಿ, ಆಕೆಗೆ ಮುತ್ತಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಾಯಕನ ವರ್ತನೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ

ಖ್ಯಾತ ಗಾಯಕ ಅಂಗರಾಗ್ ಪ್ಯಾಪೊನ್ ಮಹಂತಾ ವಿವಾದದಲ್ಲಿ ಸಿಲುಕಿದ್ದಾರೆ. ರಿಯಾಲಿಟಿ ಶೋ ಒಂದರಲ್ಲಿ ಪ್ಯಾಪೊನ್ ಅಪ್ರಾಪ್ತೆಗೆ ಚುಂಬಿಸಿರುವ ಬಗ್ಗೆ ಕೇಸ್ ದಾಖಲಾಗಿದೆ. ವಾಯ್ಸ್  ಆಫ್ ಇಂಡಿಯಾ ಕಿಡ್ಸ್  ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರುವ ಪ್ಯಾಪೊನ್ ಅದೇ ಶೋನಲ್ಲಿ ಬಾಲಕಿಯೊಬ್ಬಳ ಮುಖಕ್ಕೆ ಬಣ್ಣ ಹಚ್ಚಿ, ಆಕೆಗೆ ಮುತ್ತಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಾಯಕನ ವರ್ತನೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಪ್ರೀಂಕೋರ್ಟ್ ವಕೀಲ ರುನಾ ಭುಯಾನ್ ಎಂಬುವವರು ಗಾಯಕನ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದರು. ಇದೀಗ ಪ್ಯಾಪೊನ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾಗಿದೆ.

loader