ಮಧ್ಯಾಹ್ನ 2.40ರ ಸುಮಾರಿನಲ್ಲಿ ಮತ್ತಿಕೆರೆಯಿಂದ ಮಲ್ಲೇಶ್ವರಂನ ನಿವಾಸಕ್ಕೆ ಶ್ರೀದೇವಿ ಅವರು ಆಟೋದಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಕ್ಯಾಬ್ ಒಂದು ಆಟೋ'ಗೆ ಡಿಕ್ಕಿ ಹೊಡೆದಿದೆ.
ಬೆಂಗಳೂರು(ಸೆ.28): ಸಿಗ್ನಲ್ ನಲ್ಲಿ ನಿಂತಿದ್ದ ಆಟೋಗೆ ಕ್ಯಾಬ್ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ತೆರಳುತಿದ್ದ ಚಿತ್ರನಟಿ ಸಿಂಧು ಮೆನನ್ ತಾಯಿ ಶ್ರೀದೇವಿ ಅವರು ಗಾಯಗೊಂಡಿದ್ದಾರೆ.
ಮಧ್ಯಾಹ್ನ 2.40ರ ಸುಮಾರಿನಲ್ಲಿ ಮತ್ತಿಕೆರೆಯಿಂದ ಮಲ್ಲೇಶ್ವರಂನ ನಿವಾಸಕ್ಕೆ ಶ್ರೀದೇವಿ ಅವರು ಆಟೋದಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಕ್ಯಾಬ್ ಒಂದು ಆಟೋ'ಗೆ ಡಿಕ್ಕಿ ಹೊಡೆದಿದೆ. ಶ್ರೀದೇವಿ ಅವರ ಎದೆಯ ಭಾಗಕ್ಕೆ ತೀವ್ರ ಗಾಯವಾಗಿದೆ. ಗಾಯಾಳುವಿಗೆ ಚಿಕಿತ್ಸೆ ಕೊಡಿಸುವ ಬದಲು ಕ್ಯಾಬ್ ಹಾಗೂ ಆಟೋ ಚಾಲಕರು ಜಗಳಕ್ಕಿಳಿದ್ದಿದ್ದಾರೆ.
ಒಂದು ಗಂಟೆ ಕಾಲ ಚಿಕಿತ್ಸೆ ಸಿಗದೆ ಆಟೋದಲ್ಲಿದ್ದ ಶ್ರೀದೇವಿ ಅವರು ನಂತರ ತಮ್ಮ ಪುತ್ರ ಮನೋಜ್ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮನೋಜ್ ತಾಯಿಯನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
