ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲೂ ಚುನಾವಣೆ ..?

First Published 18, Jun 2018, 11:37 AM IST
Simultaneous elections for Lok Sabha and Assembly
Highlights

ನರೇಂದ್ರ ಮೋದಿ ಅವರು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯುವ ನಿಟ್ಟಿನಲ್ಲಿ ವ್ಯಾಪಕ ಚರ್ಚೆ ನಡೆಯಬೇಕು ಎಂದು ಪುನಃ ಒತ್ತಿ ಹೇಳಿದರು. 

ನವದೆಹಲಿ: ನರೇಂದ್ರ ಮೋದಿ ಅವರು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯುವ ನಿಟ್ಟಿನಲ್ಲಿ ವ್ಯಾಪಕ ಚರ್ಚೆ ನಡೆಯಬೇಕು ಎಂದು ಪುನಃ ಒತ್ತಿ ಹೇಳಿದರು. ನೀತಿ ಆಯೋಗದ ಸಭೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಏಕಕಾಲಕ್ಕೆ ವಿಧಾನಸಬೆ ಹಾಗೂ ಲೋಕಸಭೆ ಚುನಾವಣೆ ನಡೆಯುವಂತಾಗಲು ಚರ್ಚೆಗಳು ನಡೆಯಬೇಕು. 

ಇದರುಂದ ಹಣಕಾಸು ಉಳಿತಾಯವಾಗ್ತುತದೆ ಹಾಗೂ ಸಂಪನ್ಮೂಲಗಳ ಸದ್ಬಳಕೆ ಆಗಲಿದೆ ಎಂದು ಹೇಳಿದರು. ಇದೇ ವೇಳೆ ಕಾರ್ಪೋರೆಟ್‌ ಕಂಪನಿಗಳು ಕೃಷಿಯಲ್ಲಿ ಅಷ್ಟಾಗಿ ಬಂಡವಾಳ ತೊಡಗಿಸುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರಗಳು ಕಾರ್ಪೋರೆಟ್‌ ಕಂಪನಿಗಳನ್ನು ಕೃಷಿಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದರು.

loader