ಪ್ರಶಸ್ತಿ ಬೇಡವೆಂದು ಪ್ರಧಾನಿಗೆ ಪತ್ರ ಬರೆದ ಸಿದ್ಧೇಶ್ವರ ಶ್ರೀ

Siddeshwara Shri Write Letter To PM Modi
Highlights

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ವಿಜಯಪುರದ ಜ್ಞಾನಯೋಗಾಶ್ರಮ ಸಿದ್ಧೇಶ್ವರ ಶ್ರೀಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಪತ್ರ ಬರೆಯುವ ಮೂಲಕ ತಮಗೆ ಪ್ರಶಸ್ತಿ ಬೇಡವೆಂದು ಮನವಿ ಮಾಡಿದ್ದಾರೆ.

ವಿಜಯಪುರ : ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ವಿಜಯಪುರದ ಜ್ಞಾನಯೋಗಾಶ್ರಮ ಸಿದ್ಧೇಶ್ವರ ಶ್ರೀಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಪತ್ರ ಬರೆಯುವ ಮೂಲಕ ತಮಗೆ ಪ್ರಶಸ್ತಿ ಬೇಡವೆಂದು ಮನವಿ ಮಾಡಿದ್ದಾರೆ.

 ಈ ಪ್ರಶಸ್ತಿ ನೀಡಿದ್ದಕ್ಕೆ ಧನ್ಯವಾದಗಳು, ಆದರೆ ಇಂತಹ ಪ್ರಶಸ್ತಿಗಳನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಸಾಧಕರಿಗೆ ನೀಡಿ ಗೌರವಿಸಿ ಎಂದು ಪತ್ರದಲ್ಲಿ ಹೇಳಿದ್ದಾರೆ.

ಅಲ್ಲದೇ ತಾವೊಬ್ಬ ಸಾಮಾನ್ಯ ಆಧ್ಯಾತ್ಮಿಕ ಜೀವಿ. ಅದಕ್ಕಾಗಿ ಈ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ. ತಾವುಗಳು ಅನ್ಯಥಾ ತಪ್ಪು ಭಾವಿಸಬೇಡಿ ಶುಭಂ ಎಂದು ಹೇಳಿ ಸಹಿ ಮಾಡಿ ಪ್ರಧಾನಿಗೆ ಪತ್ರ ರವಾನಿಸಿದ್ದಾರೆ.

loader