ಬೆಂಗಳೂರು]ಮೇ 08]  ಸಿದ್ದರಾಮಯ್ಯ ಮತ್ತೆ ಸಿಎಂ  ಆಗಬೇಕು ಇದು ಕಾಂಗ್ರೆಸ್ ವಲಯದ ಹಲವು ಮುಖಂಡರಿಂದ ಕೇಳಿ ಬರುತ್ತಿರುವ ಕೂಗು. ಆದರೆ ಇದಕ್ಕೆಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಖುದ್ದಾಗಿ ತೆರೆ ಎಳೆಯುವ ಮನಸ್ಸು ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ’ನಮ್ಮ ಪಕ್ಷದ ಶಾಸಕರು ಅಭಿಮಾನದಿಂದ ನಾನು ಮತ್ತೆ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಈಗ ಸಿಎಂ ಹುದ್ದೆ ಖಾಲಿಯಿಲ್ಲ. ಈಗ ಸಿಎಂ ಯಾರಾಗಬೇಕು ಎಂಬ ಪ್ರಶ್ನೆ ಅಷ್ಟು ಸಮಂಜಸವಲ್ಲ’ ಎಂದು ಬರೆದುಕೊಂಡಿದ್ದಾರೆ.