ಬೆಂಗಳೂರು [ಜು.19] :  ಕರ್ನಾಟಕ ರಾಜಕೀಯದಲ್ಲಿ ಪ್ರಹಸನ ನಡೆಯುತ್ತಿದ್ದು, ಅವಿಶ್ವಾಸಕ್ಕೆ ಡೆಡ್ ಲೈನ್ ನೀಡಲಾಗಿದೆ. ಇತ್ತ ಮೈತ್ರಿ ನಾಯಕರು ಮಾಸ್ಟರ್ ಪ್ಲಾನ್ ನಲ್ಲಿ ತೊಡಗಿದ್ದು, ತಡರಾತ್ರಿವರೆಗೂ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ. 

ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ನಾಗೇಂದ್ರ ಅವರನ್ನು ಕರೆತರಲು ವ್ಯವಸ್ಥೆ ಮಾಡಲು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇನ್ನು ಕಿಡ್ನಾಪ್ ಆಗಿದ್ದಾರೆ ಎನ್ನಲಾದ ಶ್ರೀಮಂತ ಪಾಟೀಲ್ ಅವರನ್ನು ಮುಂಬೈ ಆಸ್ಪತ್ರೆಯಿಂದ ಕರೆತರಲು ಸಾಧ್ಯವೇ ಎಂದು ಮಾಹಿತಿ ಪಡೆದಿದ್ದಾರೆ. 

ಹಲವು ಅತೃಪ್ತ ಶಾಸಕರು ಮುಂಬೈ ನಲ್ಲಿ ಬೀಡು ಬಿಟ್ಟಿದ್ದು, ಇದರೊಂದಿಗೆ ಇನ್ನಷ್ಟು ಕಾಂಗ್ರೆಸಿಗರು ಕಲಾಪಕ್ಕೆ ಗೈರಾಗಿದ್ದಾರೆ. ಇದು ಮೈತ್ರಿ ಪಾಳಯದಲ್ಲಿ ಆತಂಕಕ್ಕೆ ಎಡೆ ಮಾಡಿದ್ದು, ನಿರಂತರ ಪ್ರಯತ್ನಗಳು ನಡೆಸುತ್ತಿದ್ದಾರೆ. ಆದರೆ ಈ ಯತ್ನ ಸಫಲವಾಗುವುದು ಮಾತ್ರ ಅನುಮಾನವಾಗಿದೆ.

 ದರೆ ಇತ್ತ ವಿಶ್ವಾಸಮತಕ್ಕೆ ಸೂಚನೆ ನೀಡಿ ಇಂದು ಮಧ್ಯಾಹ್ನಕ್ಕೆ ಡೆಡ್ ಲೈನ್ ನೀಡಲಾಗಿದೆ. ಅದರಂತೆ ವಿಶ್ವಾಸಮತ ಯಾಚಿಸುವುದೇ ಸೂಕ್ತ ಎಂದು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.