ಹಾಸನ[ಸೆ.21]: ರಾಜಕೀಯದಲ್ಲಿ ಎನೇ ಇದ್ದರೂ ಕೂಡ ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಸಂಬಂಧ ಅಗಾಧವಾದದ್ದು, ರಾಜಕೀಯ ಏನೇ ಇರಲಿ, ಯಾರು ಏನೇ ಹೇಳಿಲಿ ಅವರೇ ನಮ್ಮ ನಾಯಕರು ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತು ಸಿದ್ದರಾಮಯ್ಯನವರ ನಡುವೆ ಸಮ್ಮಿಶ್ರ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ವಾಗ್ವಾದ ನಡೆದ ನಡುವೆ ರೇವಣ್ಣ ಈ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಅರಸೀಕೆರೆ ತಾಲೂಕಿನ ಗಂಗೆಮಡು ಗ್ರಾಮದಲ್ಲಿ ಕಾಗಿನೆಲೆ ಕನಕಪೀಠದಿಂದ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ರೇವಣ್ಣ ಜೊತೆಯಾಗಿ ಪಾಲ್ಗೊಂಡು ಮಾತನಾಡಿದರು.

ಸಿದ್ದರಾಮಯ್ಯ ಅವರ ವಿರುದ್ಧ ನಾನೆಂದೂ ಕೂಡ ಸಣ್ಣದಾಗಿ ಮಾತನಾಡಲು ಹೋಗಲ್ಲ. ರಾಜಕೀಯದಲ್ಲಿ ಏರುಪೇರು ಸಹಜ. ಆದರೆ, ವಿಶ್ವಾಸಕ್ಕೆ ಎಂದೂ ಕೂಡ ಧಕ್ಕೆ ಬರಬಾರದು.

ಸೆಲ್ಫಿಗೆ ಮುಗಿ ಬಿದ್ದ ಅಭಿಮಾನಿಗಳು:

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸೆಲ್ಫಿಗೆ ಅಭಿಮಾನಿಗಳು ಮುಗಿ ಬಿದ್ದರು. ವೇದಿಕೆ ಮೇಲೆ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಸಿದ್ದು ಫೋಸ್‌ ನೀಡಿದರು. ಕೂಲಾಗಿ ಎಲ್ಲರೊಟ್ಟಿಗೂ ಸೆಲ್ಫಿ ಕ್ಲಿಕ್ಕಸಲು ಸಿದ್ದರಾಮಯ್ಯ ಸಹಕರಿಸಿದರು.