ಡಿಕೆಶಿಗೆ ಸಿದ್ದರಾಮಯ್ಯ ನೀಡಿರುವ ಸಲಹೆಯೇನು ಗೊತ್ತಾ?

Siddaramaiah advices D K Shivkumar
Highlights

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ವಿಚಾರವಾಗಿ ಶಿವಕುಮಾರ್’ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೆಲ ಸಲಹೆ ನೀಡಿದ್ದಾರೆ. 

ಬೆಂಗಳೂರು (ಜೂ. 02): ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ವಿಚಾರವಾಗಿ ಶಿವಕುಮಾರ್’ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೆಲ ಸಲಹೆ ನೀಡಿದ್ದಾರೆ. 

ಸದ್ಯಕ್ಕೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಬೇಡ. ಒಂದಷ್ಟು ದಿನ ಕಾಯೋದು ಸೂಕ್ತ. ಸಚಿವ ಸಂಪುಟದಲ್ಲಿ ಮಂತ್ರಿಯಾಗೋದು ಉತ್ತಮ. ಸಂಪುಟದಲ್ಲಿ ನಿಮ್ಮಂತವರ ಅಗತ್ಯ ಪಕ್ಷಕ್ಕಿದೆ. ಸಂಪುಟದಿಂದ ಹೊರಗಿದ್ದು ಅಧ್ಯಕ್ಷ ಗಿರಿ ಕೇಳೋದು ಬೇಡ. ಹೈಕಮಾಂಡ್ ನಿರ್ಧಾರಗಳಿಗೆ ಬದ್ಧರಾಗಿ ಕೆಲಸ ಮಾಡಿ ಎಂದು ಸಿದ್ದರಾಮಯ್ಯ ಡಿಕೆಶಿಗೆ ಸಲಹೆ ನೀಡಿದ್ದಾರೆ. 

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿ ತೆಗೆದುಕೊಂಡರೆ ಸೂಕ್ತ. ಈಗ ಸಂಪುಟದಲ್ಲಿ ಸಚಿವರಾಗಿ ಮುಂದುವರೆಯಿರಿ. ರಾಜಕೀಯದಲ್ಲಿ ಉತ್ತಮ ಭವಿಷ್ಯ ನಿಮಗಿದ ಎಂದಿದ್ದಾರೆ. 

ಡಿ.ಕೆ.ಶಿ ಹಾಗೂ ಡಿ.ಕೆ ಸುರೇಶ್ ಮೇಲೆ ಸಿ.ಬಿ.ಐ ನಿಂದ ಸರ್ಚ್ ವಾರೆಂಟ್ ಜಾರಿ ವಿಚಾರವಾಗಿ ಆರ್ಥಿಕ ಅಪರಾಧ ಪ್ರಕರಣದ ಕುರಿತಂತೆ ಹೆಚ್ಚಿನ ಗಮನ ವಹಿಸುವುದು ಸೂಕ್ತ.ಸಂಪುಟದಲ್ಲಿ ಸಚಿವರಾಗಿದ್ದುಕೊಂಡು ಕಾನೂನು ಹೋರಾಟ ಮುಂದುವರೆಸಿ ಎಂದು  ಮಾಜಿ ಪವರ್ ಮಿನಿಸ್ಟರ್ ಗೆ ಮಾಜಿ ಸಿಎಂ ಟಿಪ್ಸ್ ನೀಡಿದ್ದಾರೆ.  

loader