ರಾಹುಲ್ ಇಂಗಳೇಶ್ವರ ಮಠದ ಭೇಟಿ ತಪ್ಪಿಸಿದ ಎಂ.ಬಿ ಪಾಟೀಲ್

First Published 28, Feb 2018, 3:09 PM IST
Siddalinag Swamiji Slams MB Patil
Highlights

ಬಸವಣ್ಣನವರ ಜನ್ಮ ತಾಣ ಬಸವನ ಬಾಗೇವಾಡಿಯ ಇಂಗಳೇಶ್ವರ ಮಠಕ್ಕೆ ಭೇಟಿ ನೀಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಪ್ಪಿದ್ದರು, ಆದರೆ ಸಚಿವ ಎಂ.ಬಿ.ಪಾಟೀಲ್ ತಪ್ಪಿಸಿದ್ದಾರೆ ಎಂದು ವಿರಕ್ತ ಮಠದ ಡಾ. ಸಿದ್ದಲಿಂಗ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ನವದೆಹಲಿ: ಬಸವಣ್ಣನವರ ಜನ್ಮ ತಾಣ ಬಸವನ ಬಾಗೇವಾಡಿಯ ಇಂಗಳೇಶ್ವರ ಮಠಕ್ಕೆ ಭೇಟಿ ನೀಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಪ್ಪಿದ್ದರು, ಆದರೆ ಸಚಿವ ಎಂ.ಬಿ.ಪಾಟೀಲ್ ತಪ್ಪಿಸಿದ್ದಾರೆ ಎಂದು ವಿರಕ್ತ ಮಠದ ಡಾ. ಸಿದ್ದಲಿಂಗ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ಸಂಸದ ಪಿ.ಸಿ. ಗದ್ದಿಗೌಡರ್ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಕೊನೇ ಕ್ಷಣದಲ್ಲಿ ರಾಹುಲ್ ಭೇಟಿಯನ್ನು ರದ್ದುಪಡಿಸಿದ್ದಕ್ಕೆ ಎಂ.ಬಿ.ಪಾಟೀಲ್ ಅವರೇ ಕಾರಣ. ನಾನೇ ಖುದ್ದು ರಾಹುಲ್ ಭೇಟಿಯಾಗಿ ಮಠಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದೆ. ಪರಮೇಶ್ವರ್ ಮತ್ತು ಎಸ್.ಆರ್. ಪಾಟೀಲ್ ಕೂಡ ಭೇಟಿ ಖಾತರಿ ಪಡಿಸಿದ್ದರು. ಇಂಗಳೇಶ್ವರ ತಲುಪುವ ರಸ್ತೆಯ ನಕಾಶೆಯನ್ನು ಕೂಡ ಪಡೆಯಲಾಗಿತ್ತು ಎಂದು ಆರೋಪಿಸಿದರು.

loader