ಅನಾರೋಗ್ಯದ ಕಾರಣದಿಂದ ಮಠದಲ್ಲಿಯೇ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು  ಶ್ವಾಸಕೋಶ, ಜಠರ ಹಾಗೂ ಮೂತ್ರದಲ್ಲಿ ಸೋಂಕು ಇರುವ ಶಂಕೆಯಿಂದ ಅವರ ರಕ್ತದ ಮಾದರಿಯನ್ನು ಬಿಜಿಎಸ್ ಆಸ್ಪತ್ರೆಗೆ ಕಳುಹಿಸಿ ನಂತರ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಶ್ರೀಗಳಿಗೆ ಕಳೆದ ವರ್ಷವೂ ಕೂಡ ಇದೇ ರೀತಿ ಅನಾರೋಗ್ಯ ಉಂಟಾಗಿ ಬಿಜಿಎಸ್'ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.   

ಬೆಂಗಳೂರು(ಮೇ.12): ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ,​ ಗ್ಯಾಸ್ಟ್ರೋ ಎಂಟಾಲಾಜಿಸ್ಟ್ ಡಾ.ರವೀಂದ್ರ ಸ್ವಾಮೀಜಿ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

ಪಿತ್ತನಾಳ ಬ್ಲಾಕ್ ಆಗಿ ಸೋಂಕು ತಗುಲಿತ್ತು. ಸ್ಟೆಂಟ್ ಒಳಗೆಯೇ ಮತ್ತೊಂದು ಸ್ಟಂಟ್ ಅಳವಡಿಸಲಾಗಿದೆ. ಕಳೆದ ಬಾರಿಯಂತೆ ಮೆಟೆಲ್ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ಸ್ವಾಮೀಜಿಗೆ ಹೈಡೋಸ್​ ಅನಸ್ತೇಶಿಯಾ ನೀಡಲು ಸಾಧ್ಯವಿಲ್ಲ. ಸ್ವಾಮೀಜಿಗಳಿಗೆ 110 ವಯಸ್ಸಾಗಿರುವುದರಿಂದ ಹೈಡೋಸ್ ನೀಡಲ್ಲ. ಮೈಲ್ಡ್ ಅನಸ್ತೇಶಿಯಾ ನೀಡಿ ಎಂಡೋಸ್ಕೋಪಿ ಮಾಡಲಾಗಿದೆ. ಎಂಡೋಸ್ಕೋಪಿ ಮೂಲಕ ಸ್ಟಂಟ್ ಅಳವಡಿಸಲಾಗಿದೆ. ಇನ್ನುಳಿದ ಸಮಸ್ಯೆಗಳಿಗೆ ಹೈ ಆಂಟಿ ಬಯೋಟಿಕ್ಸ್ ನೀಡಲಾಗುತ್ತಿದೆ. ಶ್ರೀಗಳು 24 ಗಂಟೆಯಲ್ಲಿ ಚೇತರಿಸಿಕೊಳ್ಳುತ್ತಾರೆ ಎಂದು ಚಿಕಿತ್ಸೆ ನಂತರ ಡಾ. ರವೀಂದ್ರ ತಿಳಿಸಿದ್ದಾರೆ.

ಅನಾರೋಗ್ಯದ ಕಾರಣದಿಂದ ಮಠದಲ್ಲಿಯೇ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಶ್ವಾಸಕೋಶ, ಜಠರ ಹಾಗೂ ಮೂತ್ರದಲ್ಲಿ ಸೋಂಕು ಇರುವ ಶಂಕೆಯಿಂದ ಅವರ ರಕ್ತದ ಮಾದರಿಯನ್ನು ಬಿಜಿಎಸ್ ಆಸ್ಪತ್ರೆಗೆ ಕಳುಹಿಸಿ ನಂತರ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಶ್ರೀಗಳಿಗೆ ಕಳೆದ ವರ್ಷವೂ ಕೂಡ ಇದೇ ರೀತಿ ಅನಾರೋಗ್ಯ ಉಂಟಾಗಿ ಬಿಜಿಎಸ್'ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

ಶ್ರೀಗಳ ಆರೋಗ್ಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿಯಲ್ಲಿ ವಿಚಾರಿಸಿದ್ದು, ಇಂದು ಸಂಜೆ 6 ಗಂಟೆ ಸುಮಾರಿಗೆ ಭೇಟಿ ನೀಡುವ ಸಾಧ್ಯತೆಯಿದೆ.