ಶ್ರೀಗಳು ಎರಡು ದಿನಗಳ ಹಿಂದೆ ಕಾರ್ಯನಿಮಿತ್ತ ಮಾಗಡಿಗೆ ತೆರಳಿದ್ದರು. ಪ್ರಯಾಣದಿಂದ ಸುಸ್ತಾಗಿದ್ದಾರೆ.
ತುಮಕೂರು(ಮೇ.11): ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ನಿನ್ನೆ ರಾತ್ರಿಯಿಂದ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಿದೆ.
ಬಿಸಿಲ ಧಗೆಯಿಂದ ಈ ರೀತಿ ಉಂಟಾಗಿದ್ದು,ವೈದ್ಯರಿಂದ ಶ್ರೀಗಳ ತಪಾಸಣೆಗೊಳಪಡಿಸಲಾಗಿದೆ.ಶ್ರೀಗಳು ಎರಡು ದಿನಗಳ ಹಿಂದೆ ಕಾರ್ಯನಿಮಿತ್ತ ಮಾಗಡಿಗೆ ತೆರಳಿದ್ದರು. ಪ್ರಯಾಣದಿಂದ ಸುಸ್ತಾಗಿದ್ದಾರೆ. ಶ್ರೀಮಠದ ಹಳೇ ಮಠದಲ್ಲೇ ಸ್ವಾಮೀಜಿಗಳ ವಿಶ್ರಾಂತಿ ಹಾಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆ ವೈದ್ಯರು ಬರುವ ಸಾಧ್ಯತೆಯಿದೆ.
ಸ್ವಾಮೀಜಿಗಳಿಗೆ ಅನಾರೋಗ್ಯ ಉಂಟಾಗಿರುವ ಹಿನ್ನಲೆಯಲ್ಲಿ ಭಕ್ತರಿಗೆ ಸ್ವಾಮೀಜಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಠದ ಆವರಣ ಪೊಲೀಸರ ನಿಯೋಜಿಸಲಾಗಿದ್ದು, ಮಠಕ್ಕೆ ಪ್ರಭಾರ ಎಸ್ಪಿ ಲೋಕೇಶ್ ಕುಮಾರ್ ಭೇಟಿ ನೀಡಿದ್ದಾರೆ.
