ಭಾರತೀಯ ಸೇನೆಯ ಮೇಲೆ ಪಾಕ್ ಸೇನೆ ದಾಳಿ ಮಾಡಿರುವುದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.  ಬಿಜೆಪಿಯ ಯಾವುದಾದರೂ ನಾಯಕರು ಪ್ರಧಾನಿ ಮೋದಿಗೆ ಈಗ ಬಳೆಯನ್ನು ಕಳುಹಿಸುತ್ತಾರಾ ಎಂದು ಕಿಡಿಕಾರಿದ್ದಾರೆ.

ನವದೆಹಲಿ (ಮೇ.01): ಭಾರತೀಯ ಸೇನೆಯ ಮೇಲೆ ಪಾಕ್ ಸೇನೆ ದಾಳಿ ಮಾಡಿರುವುದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿಯ ಯಾವುದಾದರೂ ನಾಯಕರು ಪ್ರಧಾನಿ ಮೋದಿಗೆ ಈಗ ಬಳೆಯನ್ನು ಕಳುಹಿಸುತ್ತಾರಾ ಎಂದು ಕಿಡಿಕಾರಿದ್ದಾರೆ.

Add Asianetnews Kannada as a Preferred SourcegooglePreferred

ಯುಪಿಎ ಆಡಳಿತವಿದ್ದಾಗ ಇಂತದ್ದೇ ಘಟನೆ ನಡೆದಾಗ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅಂದಿನ ಪ್ರಧಾನಿಯವರಿಗೆ ಬಳೆಯನ್ನು ಗಿಫ್ಟ್ ಆಗಿ ಕೊಡಲು ಬಯಸಿದ್ದರು. ಈಗ ತಮ್ಮ ಪ್ರಧಾನಿಯವರಿಗೆ ಬಳೆಯನ್ನು ಕೊಡುತ್ತಾರಾ ಎಂದು ಕಪಿಲ್ ಸಿಬಲ್ ಕೇಳಿದ್ದಾರೆ.

ಯುಪಿಎ ಆಡಳಿತವಿದ್ದಾಗ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಇಂದೋರ್ ನಲ್ಲಿ ಭಾಷಣ ಮಾಡುತ್ತಾ, 2013 ರಲ್ಲಿ ಭಾರತೀಯ ಸೇನೆ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಗೆ ಬಳೆಯನ್ನು ಉಡುಗೊರೆಯಾಗಿ ನೀಡಬೇಕೆಂದಿದ್ದೆ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಕಪಿಲ್ ಸಿಬಲ್ ಸ್ಮೃತಿ ಇರಾನಿಗೆ ಟಾಂಗ್ ನೀಡಿದ್ದಾರೆ.