ಮೊಗ್ಗಿನ ಮನಸು ಹುಡುಗಿ ಶುಭಾ ಪೂಂಜಾ ಕನ್ನಡ ಪ್ರಭದೊಂದಿದೆ ಮಾತಿಗೆ ಸಿಕ್ಕಾಗ
ಬೆಂಗಳೂರು (ಏ. 06): ಮೊಗ್ಗಿನ ಮನಸು ಹುಡುಗಿ ಶುಭಾ ಪೂಂಜಾ ಕನ್ನಡ ಪ್ರಭದೊಂದಿದೆ ಮಾತಿಗೆ ಸಿಕ್ಕಾಗ
ಮೊಗ್ಗಿನ ಮನಸ್ಸು ಬಂದಾಗ ನೀವು ಸೂಪರ್ ಹೀರೋಯಿನ್. ಎಲ್ಲೋ ಹೋಗುವ ಲಕ್ಷಣವಿತ್ತು. ಆದರೆ ಎಲ್ಲೂ ಹೋಗಿಲ್ಲ. ಯಾಕೆ?
ಅದು ನಿಮ್ಮ ಅಭಿಪ್ರಾಯ ಮಾತ್ರ. ಯಾಕಂದ್ರೆ, ನನಗೆ ನನ್ನ ಸಿನಿಜರ್ನಿ ಖುಷಿ ಕೊಟ್ಟಿದೆ. ‘ಮೊಗ್ಗಿನ ಮನಸ್ಸು’ ಸಿನಿಮಾದಿಂದ ಶುರುವಾಗಿ ಇಲ್ಲಿಗೆ 35 ಸಿನಿಮಾಗಳಾದವು. ಅದು ತಮಾಷೆ ಅಲ್ಲ. ಅಲ್ಲಿ ನಾನು ಬಯಸಿದಂತಹ ಪಾತ್ರಗಳೂ ಸಿಕ್ಕಿವೆ ಅನ್ನೋದು ಇನ್ನು ವಿಶೇಷ. ಅದರಾಚೆ ಸೋಲು-ಗೆಲುವು ಅನ್ನೋದು ನಮ್ಮನ್ನು ಮೀರಿದ್ದು.
ಶುಭಾ ಪೂಂಜ ಪಾತ್ರಗಳ ಆಯ್ಕೆಯಲ್ಲಿ ಎಡವಿದರಾ?
ನಟಿಯಾಗಿ ನಾನು ಖುಷಿ ಆಗಿದ್ದೇನೆ ಅಂದ್ಮೇಲೆ ಪಾತ್ರಗಳ ಆಯ್ಕೆಯಲ್ಲಿ ಎಡವಿದ್ದೇನೆ ಅಥವಾ ಗೆದ್ದಿದ್ದೇನೆ ಎನ್ನುವ ಪ್ರಶ್ನೆಯೇ ಬರೋಲ್ಲ. ಈಗ ನನಗೆ ಸಿಗುತ್ತಿರುವ ಗ್ಲಾಮರಸ್ ಪಾತ್ರಗಳನ್ನು, ಒಂದಷ್ಟು ವರ್ಷ ಕಳೆದ ಮೇಲೆ ಮಾಡಲು ಸಾಧ್ಯವಿಲ್ಲ.
ಜನರ ಅಭಿಪ್ರಾಯ ಏನೇ ಇದ್ದರೂ, ನನಗೆ ಆ ಬಗ್ಗೆ ನನಗೆ ಬೇಸರವಿಲ್ಲ.
ಮಿಸ್ ಚೆನ್ನೈ ಪ್ರಶಸ್ತಿ ಗೆಲ್ಲುವ ಮೂಲಕ ತಮಿಳು ಚಿತ್ರರಂಗ ಪ್ರವೇಶ ಮಾಡಿದ್ರಿ, ಆಮೇಲೇ ನಾಯಿತು? ಜೀವನದ ಹಾದಿಯಲ್ಲಿ ತಪ್ಪಾಗಿದ್ದೆಲ್ಲಿ?
ತಮಿಳು ಚಿತ್ರರಂಗದ ಮೂಲಕ ನಾನು ಬೆಳ್ಳಿತೆರೆಗೆ ಎಂಟ್ರಿ ಆಗಿದ್ದಕ್ಕೆ ಕಾರಣ ‘ಮಿಸ್ ಚೆನ್ನೈ ಪ್ರಶಸ್ತಿ’ . ಅದು ಸಿಕ್ಕ ನಂತರ ಒಂದಷ್ಟು ಹೆಸರು ಬಂತು. ಅಲ್ಲಿಯೇ ನಟಿಯಾಗುವ ಅವಕಾಶ ಸಿಕ್ತು. ಮಿಸ್ ಮಾಡಿಕೊಳ್ಳುವುದು ಬೇಡ ಅಂತ ಅಲ್ಲಿ ಅಭಿನಯಿಸಿದೆ. ಆಮೇಲೆ ನನ್ನದೇ ಭಾಷೆ, ಊರು ಮುಖ್ಯ ಎನಿಸಿತು. ಆ ಹೊತ್ತಿಗೆ ಇಲ್ಲಿಗೆ ಬಂದೆ. ಸರಿ-ತಪ್ಪುಗಳನ್ನು ವಿಮರ್ಶೆ ಮಾಡಿಕೊಳ್ಳುವ ಸ್ವಭಾವವಿದೆ ನಿಜ, ಆದ್ರೆ ಹಿಂದಿನದ್ದು ತಿರುವಿ ಹಾಕುತ್ತಾ ಕೂರುವ ಅಭ್ಯಾಸ ನಂಗಿಲ್ಲ.
ಅದ್ಭುತ ನಟಿ ಅಂತ ತೋರಿಸಿಕೊಟ್ಟವರು ನೀವು. ಆದರೆ ಈಗೀಗಂತೂ ಸೆಕ್ಸಿ ಇಮೇಜ್ ಪಾತ್ರಗಳೇ ಜಾಸ್ತಿ ಹುಡುಕಿಕೊಂಡು ಬರುತ್ತಿವೆ. ಯಾಕೆ?
ಕಲಾವಿದೆಯಾಗಿ ಎಲ್ಲ ರೀತಿಯ ಪಾತ್ರಗಳನ್ನು ಮಾಡ್ಬೇಕು ಎನ್ನುವ ಸಿದ್ಧಾಂತ ನನ್ನದು. ಹಾಗೆನೇ, ಅವೆಲ್ಲವೂ ಯಾವ್ಯಾವ ವಯಸ್ಸಿಗೆ, ಸಂದರ್ಭಕ್ಕೆ ಸೂಕ್ತ ಎನ್ನುವ ಅರಿವೂ ನನಗಿದೆ. ಈಗ ನಾನು ಮಾಡುತ್ತಿರುವ ಗ್ಲಾಮರಸ್ ಪಾತ್ರಗಳಿಗೆ ವಯಸ್ಸಾದ ಮೇಲೆ ಬಣ್ಣ ಹಚ್ಚುವುದಕ್ಕೆ ಆಗೋದಿಲ್ಲ. ಕೆಲವು ಪಾತ್ರಗಳ ಬೇಡಿಕೆಯೇ ಹಾಗಿರುತ್ತೆ. ಅದಕ್ಕೆ ತಕ್ಕಂತೆ ಇತಿ-ಮಿತಿಯೊಳಗೆ ಅಭಿನಯಿಸಿದ್ದೇನೆ. ಇದಕ್ಕೆ ಬೇರೆ ತರಹದ ಹಣೆ ಪಟ್ಟಿ ಕಟ್ಟಬೇಕಿಲ್ಲ.
ಈಗೇಕೆ ಸ್ಟಾರ್ ಸಿನಿಮಾ ಸಿಗುತ್ತಿಲ್ಲ?
ಅದೆಲ್ಲವೂ ನಮ್ಮ ಕೈಯಲ್ಲಿಲ್ಲ. ಅದನ್ನು ನಿರ್ಧರಿಸುವವರು ನಿರ್ಮಾಪಕರು ಮತ್ತು ನಿರ್ದೇಶಕರು. ಅಂತಹ ಅವಕಾಶ ಬಂದ್ರೆ ಖಂಡಿತವಾಗಿಯೂ ನಾನ್ ರೆಡಿ.ಹಾಗಂತ ಸ್ಟಾರ್ ಸಿನಿಮಾಗಳಿಗಾಗಿ ಕಾದು ಕೂರುವುದು ಕಲಾವಿದೆಯಾಗಿ ನನಗಿಷ್ಟವಿಲ್ಲ.
ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದ್ಯಾ? ನಿಮಗೆ ಯಾರಾದರೂ ತೊಂದರೆ ಕೊಟ್ಟಿದ್ದಾರಾ?
ಅದರ ಬಗ್ಗೆ ಕಾಮೆಂಟ್ ಮಾಡೋದಕ್ಕೆ ನನಗೆ ಇಷ್ಟವಿಲ್ಲ.ಇಲ್ಲಿ ಅದನ್ನು ಹೆಚ್ಚು ಹೈಲೆಟ್ ಮಾಡಿ ಮಾತನಾಡುತ್ತಿರುವುದರ ಕಾರಣ ನನಗೆ ಅರ್ಥವಾಗುತ್ತಿಲ್ಲ.ಅಂತಹ ಅನುಭವ ಈತನಕ ಇಲ್ಲಿ ಆಗಿಲ್ಲ. ನನ್ನ ಪ್ರಕಾರ ಕನ್ನಡ ಚಿತ್ರೋದ್ಯಮದಲ್ಲಿಯೇ
ನಟಿಯರಿಗೆ ಹೆಚ್ಚು ರಕ್ಷಣೆ ಇದೆ.
‘ಜಯಮಹಲ್’ ಮತ್ತು ಇತರೆ ನಿಮ್ಮ ಸಿನಿಮಾಗಳ ಬಗ್ಗೆ ಹೇಳಿ?
‘ಜಯಮಹಲ್’ ಒಂದೊಳ್ಳೆ ಸಿನಿಮಾ. ನಾನು ಅಭಿನಯಿಸಿದ್ದು ಇದೇ ಮೊದಲ ಹಾರರ್ ಸಿನಿಮಾ. ಕತೆ ಅದ್ಭುತವಾಗಿದೆ. ಇಲ್ಲಿ ನಾನು ಗೃಹಿಣಿ. ವಿದೇಶದಿಂದ ನಮ್ಮ ದೇಶಕ್ಕೆ ಬರುವ ಪಾತ್ರ
