ಜಿ. ಮಾದೇಗೌಡರ ಮನೆಗೆ ತೆರಳಿದ ಶ್ರೀರಾಮುಲು ಕಾವೇರಿ ವಿಚಾರದಲ್ಲಿ ಮುಂದಿನ ಹೋರಾಟಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು
ಮಂಡ್ಯದಲ್ಲಿ ಬಿಜೆಪಿ ಸಂಸದ ಶ್ರೀರಾಮಲು ಕಾವೇರಿ ಹೋರಾಟಗಾರ ಮಾದೇಗೌಡರನ್ನು ಭೇಟಿಯಾಗಿ ಕಾವೇರಿ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ರು.. ಮಾಜಿ ಸಚಿವ ಜನಾರ್ಧನ ರೆಡ್ಡಿ ಮಗಳ ಮದುವೆಗೆ ಕೆಲ ಪ್ರಮುಖರನ್ನು ಆಮಂತ್ರಿಸಲು ಸಂಸದ ಶ್ರೀರಾಮುಲು ಮಂಡ್ಯಕ್ಕೆ ಆಗಮಿಸಿದ್ದರು. ಈ ವೇಳೆ ವಿವಿಧ ಮುಖಂಡರ ಜೊತೆ ಕಾವೇರಿ ಹೋರಾಟಗಾರ ಜಿ. ಮಾದೇಗೌಡರ ಮನೆಗೆ ತೆರಳಿದ ಶ್ರೀರಾಮುಲು ಕಾವೇರಿ ವಿಚಾರದಲ್ಲಿ ಮುಂದಿನ ಹೋರಾಟಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಶ್ರೀರಾಮುಲು ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರೋ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದರು.
