ಎರಡು ದಿನಗಳ ಹಿಂದೆ ವೆಬ್ ಸೈಟ್ ಹ್ಯಾಕ್ಡ್ ಬೈ ಪಾಕ್ ಸೈಬರ್ ಪ್ರೊಫೆಶನಲ್ಸ್ ಎಂಬ ಸಂದೇಶ ಕಂಡು ಬಂದಿತ್ತು.

ಉಡುಪಿ(ಅ.15): ಶ್ರೀ ಕೃಷ್ಣಮಠದ ಅಧಿಕೃತ ವೆಬ್'ಸೈಟ್ ಹ್ಯಾಕ್ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಅಚಾನಕ್ಕಾಗಿ ಈ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಉಡುಪಿ ನಗರ ಪೊಲೀಸರಿಗೆ ಅರ್ಜಿ ಮೂಲಕ ಮಾಹಿತಿ ನೀಡಲಾಗಿದೆ. ಶ್ರೀ ಮಠದ ದೈನಂದಿನ ಚಟುವಟಿಕೆಗಳನ್ನು ಈ ಸೈಟ್'ನಲ್ಲಿ ಹಾಕಲಾಗುತ್ತದೆ. ಪೇಜಾವರ ಪರ್ಯಾಯ 2016. ಆರ್ಗ್ ವಿಳಾಸದ ಈ ವೆಬ್ ಸೈಟ್ ಸದ್ಯ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಎರಡು ದಿನಗಳ ಹಿಂದೆ ವೆಬ್ ಸೈಟ್ ಹ್ಯಾಕ್ಡ್ ಬೈ ಪಾಕ್ ಸೈಬರ್ ಪ್ರೊಫೆಶನಲ್ಸ್ ಎಂಬ ಸಂದೇಶ ಕಂಡು ಬಂದಿತ್ತು. ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ.