ಶ್ರುತಿ ಹರಿಹರನ್ ಆಯ್ತು. ಇದೀಗ ಇನ್ನೋರ್ವ ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಕೂಡ ತಮ್ಮ ಮೀ ಟೂ ಕತೆಯನ್ನು ಬಿಚ್ಚಿಟ್ಟಿದ್ದಾರೆ.
ಬೆಂಗಳೂರು : ಬಾಲಿವುಡ್ ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲೆಡೆ ಇದೀಗ #MeToo ಸದ್ದು ಮಾಡುತ್ತಿದ್ದು ಎಲ್ಲರ ಕರಾಳ ಮುಖಗಳು ಬಯಲಾಗುತ್ತಿವೆ.
ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಇದೀಗ ನಟಿ ಶ್ರದ್ಧಾ ಶ್ರೀನಾಥ್ ಕೂಡ ತಮಗಾದ ಕೆಟ್ಟ ಅನುಭವವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.
ಬೆಂಗಳೂರಿನಿಂದ ಕೊಚ್ಚಿಗೆ ಬಸ್ ನಲ್ಲಿ ತೆರಳುತ್ತಿದ್ದಾಗಿನ ತಮ್ಮ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ನಿದ್ರಿಸುತ್ತಿದ್ದ ವೇಳೆ ನನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ನನ್ನ ತೊಡೆ ಭಾಗದ ಮೇಲೆ ಕೈ ಇಟ್ಟ. ಈ ವೇಳೆ ತಾವು ಗಾಬರಿಗೊಂಡಿದ್ದೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ನಾನು ಪ್ರೂಫ್ ಹೊಂದಿಲ್ಲ. ಆದರೆ ಕೆಟ್ಟ ನೆನಪನ್ನು ಮಾತ್ರ ಹೊಂದಿದ್ದೇನೆ. ಸಾಕ್ಷಿಗಾಗಿ ಆತನ ಕೈಯನ್ನು ನನ್ನ ತೊಡೆ ಮೇಲೆ ಇಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳಬೇಕಿತ್ತೇ ಎಂದು ಹೇಳಿದ್ದಾರೆ.
