500, 1000 ರೂಪಾಯಿಯ ನೋಟುಗಳು ರದ್ದಾದಂತೆ, ಉಪ್ಪಿನ ಬೆಲೆಯೂ ಗಗನಕ್ಕೆ ಏರಿರುವ ವದಂತಿ ಸೃಷ್ಟಿಯಾಗಿದೆ. ಇನ್ನು ಮುಂದೆ ಉಪ್ಪೇ ಸಿಗುವುದಿಲ್ಲ ಅಂತ ಯಾರೋ ಸುಳ್ಳು ವದಂತಿ ಹಬ್ಬಿಸಿದ್ದರಿಂದ ಉಪ್ಪು ಖರೀದಿಸಲು ಕಿರಾಣಿ ಅಂಗಡಿಗಳಿಗೆ ಲಗ್ಗೆ ಇಡುತ್ತಿದ್ದಾರೆ. ರಾಯಚೂರಿನಲ್ಲಿ ಇದೇ ವದಂತಿ ಸೃಷ್ಟಿಯಾಗಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಅಂಗಡಿ ಮಾಲೀಕರು ಗ್ರಾಹಕರ ಬಳಿ ಒಂದು ಚೀಲ ಉಪ್ಪಿಗೆ 500 ರೂಪಾಯಿ ಸ್ವೀಕರಿಸುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಸುವಣ೯ನ್ಯೂಸ್ ಕ್ಯಾಮರಾ ನೋಡಿದ ಮಾಲೀಕ ಬೆಚ್ಚಿಬಿದ್ದು ಗ್ರಾಹಕನಿಗೆ ಕೊಡುತ್ತಿದ್ದ ನಕಲಿ ಬಿಲ್ಲನ್ನು ಬಚ್ಚಿಟ್ಟುಕೊಳ್ಳಲು ಯತ್ನಿಸಿದ್ದ.
ಬೆಂಗಳೂರು(ನ.14): 500, 1000 ರೂಪಾಯಿಯ ನೋಟುಗಳು ರದ್ದಾದಂತೆ, ಉಪ್ಪಿನ ಬೆಲೆಯೂ ಗಗನಕ್ಕೆ ಏರಿರುವ ವದಂತಿ ಸೃಷ್ಟಿಯಾಗಿದೆ. ಇನ್ನು ಮುಂದೆ ಉಪ್ಪೇ ಸಿಗುವುದಿಲ್ಲ ಅಂತ ಯಾರೋ ಸುಳ್ಳು ವದಂತಿ ಹಬ್ಬಿಸಿದ್ದರಿಂದ ಉಪ್ಪು ಖರೀದಿಸಲು ಕಿರಾಣಿ ಅಂಗಡಿಗಳಿಗೆ ಲಗ್ಗೆ ಇಡುತ್ತಿದ್ದಾರೆ.
ರಾಯಚೂರಿನಲ್ಲಿ ಇದೇ ವದಂತಿ ಸೃಷ್ಟಿಯಾಗಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಅಂಗಡಿ ಮಾಲೀಕರು ಗ್ರಾಹಕರ ಬಳಿ ಒಂದು ಚೀಲ ಉಪ್ಪಿಗೆ 500 ರೂಪಾಯಿ ಸ್ವೀಕರಿಸುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಸುವಣ೯ನ್ಯೂಸ್ ಕ್ಯಾಮರಾ ನೋಡಿದ ಮಾಲೀಕ ಬೆಚ್ಚಿಬಿದ್ದು ಗ್ರಾಹಕನಿಗೆ ಕೊಡುತ್ತಿದ್ದ ನಕಲಿ ಬಿಲ್ಲನ್ನು ಬಚ್ಚಿಟ್ಟುಕೊಳ್ಳಲು ಯತ್ನಿಸಿದ್ದ.
ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
ರಾಜ್ಯದಲ್ಲಿ ಉಪ್ಪಿಗೆ ಕೊರತೆ ಇಲ್ಲ. ಸಾಕಷ್ಟು ಪ್ರಮಾಣದ ದಾಸ್ತಾನು ಇದೆ. ಜನರು ಯಾರೂ ಗಾಬರಿಗೊಳಗಾಗಬಾರದು. ವದಂತಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕಲಬುರಗಿ, ಮೈಸೂರು ಸೇರಿದಂತೆ ಕೆಲವೆಡೆ ಉಪ್ಪಿನ ಕೊರತೆ ಬಗ್ಗೆ ವದಂತಿ ಹಬ್ಬಿಸಲಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ. ಗ್ರಾಹಕರಿಗೆ ನಿಗದಿತ ದರಕ್ಕಿಂತ ಹೆಚ್ಚು ಹಣ ವಿಧಿಸಿದ್ದಲ್ಲಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
