ಅಮೆರಿಕದ ಶಾಲೆಯೊಂದರಲ್ಲಿ ಗುಂಡಿನ ದಾಳಿಗೆ ಮಕ್ಕಳು ಸೇರಿದಂತೆ 17 ಮಂದಿ ಬಲಿಯಾಗಿರುವ ಘಟನೆ ಅಮೆರಿಕದ ಫ್ಲೋರಿಡಾದ ಪಾರ್ಕ್ ಲ್ಯಾಂಡ್ ಎಂಬಲ್ಲಿ ನಡೆದಿದೆ.

ವಾಷಿಂಗ್ಟನ್ : ಅಮೆರಿಕದ ಶಾಲೆಯೊಂದರಲ್ಲಿ ಗುಂಡಿನ ದಾಳಿಗೆ ಮಕ್ಕಳು ಸೇರಿದಂತೆ 17 ಮಂದಿ ಬಲಿಯಾಗಿರುವ ಘಟನೆ ಅಮೆರಿಕದ ಫ್ಲೋರಿಡಾದ ಪಾರ್ಕ್ ಲ್ಯಾಂಡ್ ಎಂಬಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಅದೇ ಶಾಲೆಯ ಹಳೇ ವಿದ್ಯಾರ್ಥಿ ಗುಂಡಿನ ದಾಳಿ ನಡೆಸಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ್ದಾನೆ, ಈ ಹಿಂದೆ ದುರ್ವತನೆಯ ಹಿನ್ನೆಲೆ ಆತನನ್ನ ಶಾಲೆಯಿಂದ ಹೊರಹಾಕಲಾಗಿತ್ತು.

ಹಳೇ ವಿದ್ಯಾರ್ಥಿಯನ್ನ ನಿಕೋಲಾಸ್ ಕ್ರೂಝ್ ಎಂದು ಗುರುತಿಸಲಾಗಿದ್ದು, ಆತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ದಾಳಿ ಅಮೆರಿಕದಲ್ಲಿ ಈ ವರ್ಷ ನಡೆಯುತ್ತಿರುವ 18ನೇ ದಾಳಿಯಾಗಿದೆ.