Asianet Suvarna News Asianet Suvarna News

ಟಾಯ್ಲೆಟ್'ನಲ್ಲಿ ಕೆಪಿಎಸ್ಸಿ ಭೂರಿ ಭೋಜನ: 9 ಟಾಯ್ಲೆಟ್, 7 ವರ್ಷ, 60 ಲಕ್ಷ..!

Shocking KPSC Spent Lakhs Of Money For Toilet Maintainence

ಬೆಂಗಳೂರು(ಸೆ.15): ಸಾಮಾನ್ಯವಾಗಿ ಒಂದು ಕಟ್ಟಡದಲ್ಲಿ  ಶೌಚಾಲಯ ನಿರ್ವಹಣೆಗೆ ಎಷ್ಟು ಖರ್ಚಾಗಬಹುದು..? ಒಂದು ವರ್ಷಕ್ಕೆ ಎಷ್ಟು ಖರ್ಚಾಗಬಹುದು? ಹೆಚ್ಚೆಂದರೆ 10 ಸಾವಿರ, ಸಾಧ್ಯವಿಲ್ಲ. ಸರ್ಕಾರಿ ದುಡ್ಡು ಎಂದರೆ ಸ್ವಲ್ಪ ಜಾಸ್ತಿನೇ ಖರ್ಚಾಗಬೇಕು. ಇದು ಅವರೇ ಹಾಕಿಕೊಂಡಿರುವ ನ್ಯಾಯ. ಆದರೆ, ಈ ಲೆಕ್ಕ ಕೇಳಿದರೆ, ಎದೆ ಧಸಕ್ ಎನ್ನುತ್ತದೆ. ಯಾಕೆಂದರೆ, ಕೆಪಿಎಸ್​ಸಿ ಬಿಲ್ಡಿಂಗ್'ನ. ಅದರ ಟಾಯ್ಲೆಟ್​ ನಿರ್ವಹಣೆಗೆ ಖರ್ಚಾಗಿರುವುದು 60 ಲಕ್ಷಕ್ಕೂ ಹೆಚ್ಚು ಇದು ಕೂಡಾ ಕೇವಲ 7 ವರ್ಷಕ್ಕೆ.

ಟಾಯ್ಲೆಟ್​ನಲ್ಲಿ ಕೆಪಿಎಸ್​ಸಿ ಭೂರಿ ಭೋಜನ: 9 ಟಾಯ್ಲೆಟ್, 7 ವರ್ಷ, 60 ಲಕ್ಷ..!

60 ಲಕ್ಷ ಖರ್ಚು ಮಾಡಿ ನಿರ್ವಹಣೆ ಮಾಡಿದ ಆ ಟಾಯ್ಲೆಟ್'ಗಳು ಅದೆಷ್ಟು ಅದ್ಭುತವಾಗಿರಬಹುದು? ಅರಮನೆ ಇದ್ದಂತೆ ಇರುತ್ತದೆ ಅಂದುಕೊಂಡಿದ್ದೀರಾ? ಆದರೆ ಅದು ಬಸ್​ಸ್ಟ್ಯಾಂಡ್ ಪಬ್ಲಿಕ್ ಟಾಯ್ಲೆಟ್​ಗಳಿಗಿಂತ ಸ್ವಲ್ಪ ಉತ್ತಮವಾಗಿವೆ ಅಷ್ಟೆ, ಹಾಗಾದರೆ, 60 ಲಕ್ಷ ಖರ್ಚಾಗಿದ್ದು ಹೇಗೆ? ಇಲ್ಲಿದೆ ವಿವರ.

ಟಾಯ್ಲೆಟ್​ನಲ್ಲಿ ಕೆಪಿಎಸ್​ಸಿ ಭೂರಿ ಭೋಜನ

ಟಾಯ್ಲೆಟ್​ನಲ್ಲಿ ಕೆಪಿಎಸ್​ಸಿ ಭೂರಿ ಭೋಜನ ಹೇಗೆಲ್ಲ ಮಾಡಿದ್ದಾರೆ ಎಂದರೆ, ಈ ಏಳು ವರ್ಷದಲ್ಲಿ 12ಕ್ಕೂ ಹೆಚ್ಚು ಬಾರಿ ಟಾಯ್ಲೆಟ್​ಗೆ ರಿಪೇರಿ ಭಾಗ್ಯ ಕರುಣಿಸಿದ್ದಾರೆ. ಒಂದೊಂದ್ಸಲದ ರಿಪೇರಿಗೂ ಕನಿಷ್ಠ 5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ನಿಮ್ಗೊಂದು ಲೆಕ್ಕ ಹೇಳ್ತೀವಿ ಕೇಳಿ. ಈ ರಿಪೇರಿ ದುಡ್ಡಿನಲ್ಲಿ ಕನಿಷ್ಠ 250 ಟಾಯ್ಲೆಟ್ ಕಟ್ಟಿಸಬಹುದಿತ್ತು.

ಇದು ಸುವರ್ಣ ನ್ಯೂಸ್​ಗೆ ಎಕ್ಸ್​ಕ್ಲೂಸಿವ್ ಆಗಿ ಸಿಕ್ಕ ದಾಖಲೆಗಳು ಬಿಚ್ಚಿಟ್ಟ ಕಥೆ. ಎಲ್ಲವನ್ನೂ ಈ ಅಧಿಕಾರಿಗಳು ಅತ್ಯಂತ ಕಾನೂನುಬದ್ಧವಾಗಿ ಮಾಡಿದ್ದಾರೆ. ನಾಚಿಕೆ & ನೈತಿಕತೆ ಎರಡನ್ನೂ ಮರೆತುಬಿಟ್ಟಿದ್ದಾರೆ. ಇದೆಲ್ಲ ಕೇವಲ 2007ರಿಂದ 2015ರವರೆಗೆ ಖರ್ಚು ಮಾಡಿರುವ ಲೆಕ್ಕ.

ಕಾರ್ಪೊರೇಟ್ ಕಂಪೆನಿಗಿಂತ 10 ಪಟ್ಟು ಹೆಚ್ಚು ಖರ್ಚು

ಕಾರ್ಪೊರೇಟ್ ಕಂ. ವರ್ಷಕ್ಕೆ ಖರ್ಚು ಮಾಡುವುದು ಗರಿಷ್ಠ 1 ಲಕ್ಷ..! 

ಕೆಪಿಎಸ್​ಸಿ ಖರ್ಚು ಮಾಡಿದ್ದು ವರ್ಷಕ್ಕೆ ಕನಿಷ್ಠ 10 ಲಕ್ಷ..!

ಹಾಗಾದರೆ, ಕೆಪಿಎಸ್​ಸಿಯವರು ಟಾಯ್ಲೆಟ್​ನಲ್ಲೇ ಇಷ್ಟು ದೊಡ್ಡ ಊಟ ಮಾಡಿರಬೇಕಾದರೆ, ಬೇರೆ ಬೇರೆ ಲೆಕ್ಕದಲ್ಲಿ ಎಷ್ಟು ತಿಂದಿರಬೇಕು..?
 

ಟಾಯ್ಲೆಟ್​ನಲ್ಲಿ ಕೆಪಿಎಸ್​ಸಿ ಭೂರಿ ಭೋಜನ

-ಪಾರಿವಾಳಗಳು ಟಾಯ್ಲೆಟ್​ಗೆ ಬರದಂತೆ ತಡೆಯಲು ಮೆಷ್ - 4 ಲಕ್ಷ

-ಅಂಗವಿಕಲರಿಗೆ ಅನುಕೂಲವಾಗಲು ರ್ಯಾಂಪ್ - 5 ಲಕ್ಷ

-ಕಸದ ತೊಟ್ಟಿ ಮತ್ತು ಶೌಚಾಲಯ ನಿರ್ವಹಣೆ - 6 ಲಕ್ಷ

-ಹೊಸ ಸದಸ್ಯರ ಕಚೇರಿ ನವೀಕರಣ - 35 ಲಕ್ಷ

-ಗೋಡೆಗೆ ಗ್ರಿಲ್ ಹಾಕಿಸಿದ್ದು - 19 ಲಕ್ಷ

-ಕಾರಿಡಾರ್ ನವೀಕರಣ  - 8 ಲಕ್ಷ

-ಒಂದೇ ಒಂದು ಏಣಿಗೆ - 5 ಲಕ್ಷ

ಅದ್ಯಾವ ಪಾರಿವಾಳದ ಮೆಷ್ 4 ಲಕ್ಷವೋ ಗೊತ್ತಿಲ್ಲ. ಅದ್ಯಾವ ಏಣಿ 5 ಲಕ್ಷದ್ದೋ ಗೊತ್ತಿಲ್ಲ. ಕೆಪಿಎಸ್​ಸಿ ಕುರ್ಚಿಯಲ್ಲಿ, ಇಂಥಾ ಅಮೋಘ ಟಾಯ್ಲೆಟ್ಟುಗಳಲ್ಲಿ ಕುಳಿತು ಹೋದ ಕೆಪಿಎಸ್​ಸಿ ಅಧ್ಯಕ್ಷರು, ಸದಸ್ಯರೇ ಹೇಳಬೇಕು. ಇನ್ನು ಒಂದೇ ದಿನಾಂಕಕ್ಕೆ ಎರಡೆರಡು ಬಿಲ್ ಬಂದಿವೆ, ಒಂದೇ ಕಾಮಗಾರಿ ಹೆಸರಿನ ಎರಡೆರಡು ಬಿಲ್ ಬಂದಿವೆ, ತುರ್ತು ಕಾಮಗಾರಿ ಹೆಸರಿನಲ್ಲಿ 50ಕ್ಕೂ ಹೆಚ್ಚು ಬಿಲ್ ಬಂದಿವೆ.

ಕಟ್ಟಡ ನಿರ್ವಹಣೆಗಾಗಿ ಖರ್ಚಾಗಿದ್ದು, 3 ಕೋಟಿಗೂ ಹೆಚ್ಚು

ಇಂಥಾ ಟಾಯ್ಲೆಟ್ಟಿಗೆ, ಇಂಥಾ ಆಫೀಸಿಗೆ 3 ಕೋಟಿ ಜನರ ತೆರಿಗೆ ದುಡ್ಡು ವೇಸ್ಟ್ ಆಗಬೇಕಾ? ಕೆಪಿಎಸ್​ಸಿ ಎಂದರೆ, ಇರುವುದೇ ಮೋಸ ಮಾಡಲು ಎನ್ನುವುದು ಜನಜನಿತವಾಗಿರುವಾಗಲೇ ಸುವರ್ಣ ನ್ಯೂಸ್​ಗೆ ಈ ಎಕ್ಸ್​ಕ್ಲೂಸಿವ್ ಡೀಟೈಲ್ಸ್ ಸಿಕ್ಕಿದೆ.
ಭ್ರಷ್ಟರು ಹೇಸಿಗೆಯ ಮೇಲಿದ್ದ ಕಿಲುಬು ಕಾಸನ್ನೂ ನಾಲಗೆಯಲ್ಲಿ ಒರೆಸಿ ಜೇಬಿಗೆ ಇಟ್ಕೋತಾರೆ ಅನ್ನೋದು ನಾಣ್ಣುಡಿ. ಅದು ನಿಜ ಅಂತಾ ಕೆಪಿಎಸ್​ಸಿಯವರು,  ಈ ಟಾಯ್ಲೆಟ್'​ನಲ್ಲಿ ಭೋಜನ ಮಾಡಿ ಸಾಬೀತು ಪಡಿಸಿದ್ದಾರೆ.

 

Latest Videos
Follow Us:
Download App:
  • android
  • ios