ಮದ್ಯದ ದೊರೆ ವಿಜಯ್ ಮಲ್ಯ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದೀರಿ, ನಮ್ಮ ಸಾಲವನ್ನು ಮನ್ನಾ ಮಾಡಿ. ಹೀಗಂತಾ ಮಂಡ್ಯ ಜಿಲ್ಲೆ ಮದ್ದೂರಿನ ಶಿವಪುರ ಎಸ್‍ಬಿಐ ಬ್ಯಾಂಕ್‌'ಗೆ ಅರ್ಜಿಯೊಂದು ಬಂದಿದೆ. ಈ ಅರ್ಜಿಯನ್ನು ಸಲ್ಲಿಸಿರುವವರು ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದ ಸುನಂದಮ್ಮ ಮತ್ತು ಪುತ್ರ ಸುಧಾಕರ್

ಮಂಡ್ಯ(ನ.25): ಆ ಕುಟುಂಬ ಕೃಷಿ ಚಟುವಟಿಕೆಗಳಿಗಾಗಿ ಬ್ಯಾಂಕ್'ನಲ್ಲಿ ಸಾಲ ಪಡೆದಿತ್ತು. ಭೀಕರ ಬರ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಾಲ ಪಾವತಿ ಮಾಡಿರಲಿಲ್ಲ. ಆದರೆ ಇದೀಗ ಕುಟುಂಬ ಸಾಲ ಕೊಟ್ಟಿದ್ದ ಬ್ಯಾಂಕ್‌ಗೆ ಅರ್ಜಿ ಸಲ್ಲಿಸುವ ಮೂಲಕ ಬ್ಯಾಂಕ್‌ ಅಧಿಕಾರಿಗಳಿಗೆ ಶಾಕ್ ನೀಡಿದೆ. ಅಷ್ಟಕ್ಕೂ ಅರ್ಜಿಯಲ್ಲಿ ಏನು ಇದೆ ಅಂತೀರಾ?ಇಲ್ಲಿದೆ ವಿವರ

ಮದ್ಯದ ದೊರೆ ವಿಜಯ್ ಮಲ್ಯ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದೀರಿ, ನಮ್ಮ ಸಾಲವನ್ನು ಮನ್ನಾ ಮಾಡಿ. ಹೀಗಂತಾ ಮಂಡ್ಯ ಜಿಲ್ಲೆ ಮದ್ದೂರಿನ ಶಿವಪುರ ಎಸ್‍ಬಿಐ ಬ್ಯಾಂಕ್‌'ಗೆ ಅರ್ಜಿಯೊಂದು ಬಂದಿದೆ. ಈ ಅರ್ಜಿಯನ್ನು ಸಲ್ಲಿಸಿರುವವರು ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದ ಸುನಂದಮ್ಮ ಮತ್ತು ಪುತ್ರ ಸುಧಾಕರ್

7 ಎಕರೆ ಕೃಷಿ ಜಮೀನು ಹೊಂದಿರುವ ಇವರು ಶಿವಪುರ ಎಸ್‌ಬಿಐ ಬ್ಯಾಂಕ್‌'ನಲ್ಲಿ ರೇಷ್ಮೆ ಕೃಷಿಗಾಗಿ 40 ಸಾವಿರ ಜೊತೆಗೆ 4.5 ಲಕ್ಷ ಟ್ರ್ಯಾಕ್ಟರ್ ಸಾಲ ಪಡೆದಿದ್ದರು. ಆದರೆ ಭೀಕರ ಬರ ಹಿನ್ನೆಲೆ ಸಾಲ ಪಾವತಿ ಮಾಡಿರಲಿಲ್ಲ. ಈಗ ಬಡ್ಡಿ ಸಮೇತ 10 ಲಕ್ಷ ಆಗಿದೆ. ಇದ್ರಿಂದ ಈ ಬಡ ಕುಟುಂಬ ಉದ್ಯಮಿ ಮಲ್ಯಗೆ ಎಸ್ ಬಿ ಐ ಬ್ಯಾಂಕ್ ಸಾಲ ಮನ್ನಾ ಮಾಡಿರುವುದನ್ನು ಮುಂದಿಟ್ಟು ಈಗ ಶಿವಪುರದ ಬ್ಯಾಂಕ್ ಗೆ ಮಲ್ಯ ರೀತಿ ನಮಗೂ ಸಾಲ ಮನ್ನಾ ಮಾಡುವಂತೆ ಅರ್ಜಿ ಸಲ್ಲಿಸಿದೆ.

ಮಳೆ ಬರದೆ ಜಮೀನಿನಲ್ಲಿ ಕೃಷಿ ಮಾಡಿಲ್ಲ. ಮಾಡಿರುವ ಸಾಲ ತೀರಿಸುವ ದಾರಿ ಕಾಣುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಮನಸು ಒಪ್ಪುತ್ತಿಲ್ಲ. ಹೀಗಾಗಿ ಬ್ಯಾಂಕ್ ಸಾಲ ಮನ್ನಾ ಮಾಡಿ ರೈತರನ್ನು ಬದುಕಿಸಿ ಎನ್ನುತ್ತಿದ್ದಾರೆ ಸುನಂದಮ್ಮ.

ವಿಜಯ ಮಲ್ಯ ಮಾಡಿರುವ ಸಾಲ ಮನ್ನಾ ಮಾಡುತ್ತದೋ ಮಾಡಲ್ವಾ ಗೊತ್ತಿಲ್ಲ. ಆದ್ರೆ ರೈತರ ಸಾಲ ಮನ್ನಾ ಮಾಡಿ ರೈತರನ್ನು ಬದುಕಿಸಿ ಎಂಬುದು ರೈತರ ಮನವಿ