ಈ ಹೊಂಡದ ಉದ್ದ 20 ಮೀಟರ್ ಇದ್ರೆ, ಆಳ 15 ಮೀಟರ್ ನಷ್ಟಿದೆ. ಜಪಾನ್ ನ ಫುಕೌಕಾ ನಗರದಲ್ಲಿ ಸಬ್ ವೇ ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ನಗರದ ಪ್ರಮುಖ ರೈಲು ನಿಲ್ದಾಣದ ಬಳಿ ಇರುವ ಐದು ಲೇನ್ ರಸ್ತೆಯ ಬಹುಭಾಗವನ್ನ ಈ ದೈತ್ಯ ರಂಧ್ರ ನುಂಗಿ ಹಾಕಿದೆ. 

ಟೋಕಿಯೋ(ನ.10): ಬೆಳಗ್ಗೆ ಎದ್ದೇಳುವಷ್ಟರಲ್ಲಿ ಜಪಾನ್ ನಗರದ ಜನರಿಗೆಲ್ಲ ಶಾಕ್ ಕಾದಿತ್ತು. ಮಾರುಕಟ್ಟೆ ಪ್ರದೇಶವೊಂದರ ಬಳಿ ರಸ್ತೆಯಲ್ಲೇ ದೊಡ್ಡದೊಂದು ಹೊಂಡ ನಿರ್ಮಾಣವಾಗಿತ್ತು. 

ಈ ಹೊಂಡದ ಉದ್ದ 20 ಮೀಟರ್ ಇದ್ರೆ, ಆಳ 15 ಮೀಟರ್ ನಷ್ಟಿದೆ. ಜಪಾನ್ ನ ಫುಕೌಕಾ ನಗರದಲ್ಲಿ ಸಬ್ ವೇ ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ನಗರದ ಪ್ರಮುಖ ರೈಲು ನಿಲ್ದಾಣದ ಬಳಿ ಇರುವ ಐದು ಲೇನ್ ರಸ್ತೆಯ ಬಹುಭಾಗವನ್ನ ಈ ದೈತ್ಯ ರಂಧ್ರ ನುಂಗಿ ಹಾಕಿದೆ. 

ಇದರಿಂದಾಗಿ ಅಕ್ಕಪಕ್ಕದಲ್ಲೇ ಇರುವ ಕಚೇರಿಗಳ ಅಡಿಪಾಯ ಕೂಡ ಅಲುಗಾಡುತ್ತಿದೆ. ಸುತ್ತಲ ಮುತ್ತಲ ನಿವಾಸಿಗಳನ್ನು ಇಲ್ಲಿಂದ ತೆರವು ಮಾಡಲಾಗಿದೆ. ಇಲ್ಲಿ ರಸ್ತೆ ದಾಟುವುದಂತೂ ಅಸಾಧ್ಯದ ಮಾತು, ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಸಹ ಉಂಟಾಗುತ್ತಿದೆ. 

2011ರಲ್ಲಿ ಸಂಭವಿಸಿದ ಭೂಕಂಪದಿಂದ ಜಪಾನ್ ನ ಹಲವೆಡೆ ಇದೇ ರೀತಿ ಭೂಮಿ ಕುಸಿದಿತ್ತು. 2006ರಲ್ಲಿ ಬಿಡುಗಡೆಯಾದ ‘ಜಪಾನ್ ಈಸ್ ಸಿಂಕಿಂಗ್’ ಚಿತ್ರದಲ್ಲಿ ಇನ್ನು 40 ವರ್ಷಗಳಲ್ಲಿ ಜಪಾನ್ ಮುಳುಗಿ ಹೋಗಲಿದೆ ಅಂತಾ ಭೂವಿಜ್ಞಾನಿಗಳು ಮತ್ತು ಅಗ್ನಿಪರ್ವತ ತಜ್ಞರು ಭವಿಷ್ಯ ನುಡಿದಿದ್ರು.