ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಆಜಾದ್ ಅಣ್ಣಿಗೇರಿ ಎಂಬಾತನಿಗೆ ‘ಭಯೋತ್ಪಾದನೆ ಸಂಘಟನೆಯಾದ ಐಸಿಸ್ ನಂಟಿದೆ' ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.  

ಬೆಂಗಳೂರು (ಡಿ.13): ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಆಜಾದ್ ಅಣ್ಣಿಗೇರಿ ಎಂಬಾತನಿಗೆ ‘ಭಯೋತ್ಪಾದನೆ ಸಂಘಟನೆಯಾದ ಐಸಿಸ್ ನಂಟಿದೆ' ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಉದ್ಯಮಿ ಆಜಾದ್ ಅಣ್ಣಿಗೇರಿ ಎಂಬಾತ ಭಾಗಿಯಾಗಿರುವುದು ಸಾಬೀತಾಗಿದೆ. ಈತನಿಗೆ ‘ಭಯೋತ್ಪಾದನೆ ಸಂಘಟನೆಯಾದ ಐಸಿಸ್‌ನೊಂದಿಗೆ ನಂಟಿದ್ದು, ಸದಸ್ಯರನ್ನು ನೇಮಕ ಮಾಡುವ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ತಕ್ಷಣ ಆತನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಆಜಾದ್ ಅಣ್ಣಿಗೇರಿ ಹೊನ್ನಾವರದಲ್ಲಿ ಹೋಟೆಲ್‌'ವೊಂದನ್ನು ನಡೆಸುತ್ತಿದ್ದಾನೆ. ಆತನ ಹೋಟೆಲ್‌ನಿಂದ ಕಾದಿರುವ ಎಣ್ಣೆಯನ್ನು ತಂದು ಪರೇಶ್ ಮುಖಕ್ಕೆ ಸುರಿಯಲಾಗಿದೆ ಎಂದು ಆರೋಪಿಸಿದ್ದಾರೆ. ಸರ್ಕಾರ ಮತ್ತು ಪೊಲೀಸ್ ಇಲಾಖೆಯು ಪರೇಶ್ ಮೇಸ್ತ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಒಂದು ವೇಳೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ತಿರುಚಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಸಿದರೆ ಇಡೀ ಕರಾವಳಿ ಹೊತ್ತಿ ಉರಿಯಲಿದೆ ಎಂದು ಎಚ್ಚರಿಕೆ ನೀಡಿದರು.