ಬಿಜೆಪಿ ಸಂಸದೆ  ಶೋಭಾ ಕರಂದ್ಲಾಜೆ ಒಂದಿಷ್ಟು ವಿವಾದಕ್ಕೆ ಎಡೆಮಾಡಿ ಕೊಡಬಹುದಾದ ರೀತಿಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ್ದಾರೆ.

ಬೆಂಗಳೂರು(ಮಾ.12): ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಒಂದಿಷ್ಟು ವಿವಾದಕ್ಕೆ ಎಡೆಮಾಡಿ ಕೊಡಬಹುದಾದ ರೀತಿಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ನಡೆದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶೋಭಾ, ಇತ್ತೀಚೆಗೆ ನಡೆದ ಶಿವಾಜಿನಗರದ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಕೊಲೆಗೆ ಸೇಡು ತೀರಿಸಿಕೊಳ್ಳಬೇಕು, ರುದ್ರೇಶ್ ಅವರ ಸಾವು ವ್ಯರ್ಥ ಆಗಬಾರದು ಎಂದು ಹೇಳಿದ್ದಾರೆ. ಶಿವಾಜಿನಗರ ಮಂಡಲ ಮಹಿಳಾ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕರಂದ್ಲಾಜೆ, ರುದ್ರೇಶ್ ಅವರನ್ನು ರಾಜಕೀಯವಾಗಿ ಹತ್ಯೆ ಮಾಡಿದವರನ್ನು ಸಮ್ಮನೆ ಬಿಡಲ್ಲ, ನಮಗೆ ಸೇಡು ತೀರಿಸಿಕೊಳ್ಳಲು ಮುಂದಿನ ಚುನಾವಣೆಯಲ್ಲಿ ಅವಕಾಶ ಸಿಗುತ್ತೆ, ಚುನಾವಣೆಗೆ ಇನ್ನು ಒಂದು ವರ್ಷ ಇದ್ದರೂ ಆರೇ ತಿಂಗಳಲ್ಲಿ ಚುನಾವಣೆ ಬರಬಹುದು, ಸಿದ್ದರಾಮಯ್ಯ ಅವರನ್ನು ಕು ಬಿಟ್ಟು ಓಡಿಸಬೇಕು, ಅದಕ್ಕಾಗಿ ಶಿವಾಜಿನಗರದಲ್ಲಿ ನಮ್ಮ ಒಬ್ಬ ಶಾಸಕ ಬರಬೇಕು' ಎಂದು ಹೇಳಿದ್ದಾರೆ.