Asianet Suvarna News Asianet Suvarna News

ಶಿವಸೇನೆಯಿಂದ ಕನ್ನಡಿಗರ ಅವಹೇಳನ: ಕಾಂಗ್ರೆಸ್‌ ಕಿಡಿ

‘ಹಲವು ಕನ್ನಡಿಗರಿಗೆ ರಾಷ್ಟ್ರಗೀತೆ ಹಾಡಲೂ ಬರಲ್ಲ. ರಾಷ್ಟ್ರಪಿತರ ಬಗ್ಗೆ ಅವರಿಗೆ ಅರಿವೇ ಇಲ್ಲ' ಎಂಬ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೋವಾ ಕಾಂಗ್ರೆಸ್‌ ವಕ್ತಾರ ಸುನೀಲ್‌ ಕವಠಂಕರ್‌, ‘ಇದು ದುರದೃಷ್ಟಕರ ಮತ್ತು ಖಂಡನಾರ್ಹ ಹೇಳಿಕೆ. ಈ ಹಿಂದೆ ಗೋವಾ ಮರಾಠಿ ಪಠ್ಯದಲ್ಲಿ ರಾಷ್ಟ್ರಗೀತೆ ಅರ್ಧ ಮುದ್ರಣವಾದಾಗ ಶಿವಸೇನೆಯ ದೇಶಭಕ್ತಿ ಎಲ್ಲಿ ಹೋಗಿತ್ತು?' ಎಂದು ಪ್ರಶ್ನಿಸಿದ್ದಾರೆ.

Shivsene Remarks About Kannadaigas Irk Congress
  • Facebook
  • Twitter
  • Whatsapp

ಪಣಜಿ: ಗೋವಾ ಶಿವಸೇನೆ ಅಧ್ಯಕ್ಷ ಶಿವಪ್ರಸಾದ್‌ ಜೋಶಿ ಅವರು ಕನ್ನಡಿಗರ ಬಗ್ಗೆ ಆಡಿರುವ ತುಚ್ಛ ಮಾತುಗಳು ಹಾಗೂ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಅವರನ್ನು ಬೆಂಬಲಿಸಿ ಆಡಿರುವ ಮಾತುಗಳನ್ನು ಗೋವಾ ಕಾಂಗ್ರೆಸ್‌ ಘಟಕ ಖಂಡಿಸಿದೆ.

‘ಹಲವು ಕನ್ನಡಿಗರಿಗೆ ರಾಷ್ಟ್ರಗೀತೆ ಹಾಡಲೂ ಬರಲ್ಲ. ರಾಷ್ಟ್ರಪಿತರ ಬಗ್ಗೆ ಅವರಿಗೆ ಅರಿವೇ ಇಲ್ಲ' ಎಂಬ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೋವಾ ಕಾಂಗ್ರೆಸ್‌ ವಕ್ತಾರ ಸುನೀಲ್‌ ಕವಠಂಕರ್‌, ‘ಇದು ದುರದೃಷ್ಟಕರ ಮತ್ತು ಖಂಡನಾರ್ಹ ಹೇಳಿಕೆ. ಈ ಹಿಂದೆ ಗೋವಾ ಮರಾಠಿ ಪಠ್ಯದಲ್ಲಿ ರಾಷ್ಟ್ರಗೀತೆ ಅರ್ಧ ಮುದ್ರಣವಾದಾಗ ಶಿವಸೇನೆಯ ದೇಶಭಕ್ತಿ ಎಲ್ಲಿ ಹೋಗಿತ್ತು?' ಎಂದು ಪ್ರಶ್ನಿಸಿದ್ದಾರೆ.

‘ಇನ್ನು ಪ್ರಮೋದ ಮುತಾಲಿಕ್‌ರನ್ನು ಮಹಿಳೆಯರ ರಕ್ಷಕ ಎಂದಿರುವ ಜೋಶಿ ಅವರ ಧೋರಣೆಯು ಶಿವಸೇನೆಯ ಮನಃಸ್ಥಿತಿ ತೋರಿಸುತ್ತದೆ. ನೈತಿಕ ಪಹರೆದಾರರು ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ಕವಠಂಕರ್‌ ಹೇಳಿದ್ದಾರೆ.

Follow Us:
Download App:
  • android
  • ios