ದಾವಣಗೆರೆ :   ರೈತರ ಆತ್ಮಹತ್ಯೆ  ಸಂಬಂಧ ಕೃಷಿ ಸಚಿವರು ಬೇಜವಾಬ್ದಾರಿಯುತವಾದ ಹೇಳಿಕೆ ನೀಡಿದ್ದಾರೆ. ದಾವಣಗೆರೆ ತಾಲೂಕಿ ಈಚಘಟ್ಟ ಗ್ರಾಮದಲ್ಲಿ ಮಾತನಾಡುತ್ತಾ ಎಲ್ಲಾ ರೈತ ಸಾವುಗಳೂ ಕೂಡ ಸಾಲ ಬಾಧೆಯಿಂದಲೇ ಆದವು ಎಂದು ಹೇಳಲಾಗುವುದಿಲ್ಲ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಅವರ ಕೌಟುಂಬಿಕ ತೊಂದರೆ ಹಾಗೂ ಬೇರೆ ಬೇರೆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಆತ್ಮಹತ್ಯೆ ವಿಚಾರಗಳನ್ನ  ಮಾಧ್ಯಮಗಳು ವೈಭವೀಕರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ಅಲ್ಲದೇ ನಮ್ಮ ಸರ್ಕಾರ ರೈತರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿದೆ.  ಸಾಲದ ಬಾಧೆಯಿಂದ ಎಲ್ಲಿ ಸತ್ತಿದ್ದಾರೆ  ತೊರಿಸಿ ಎಂದು ಮಾಧ್ಯಮದವರಿಗೆ ಪ್ರಶ್ನೆ ಕೇಳಿದ್ದಾರೆ ಈ ಮೂಲಕ ರೈತರ ಸಾವಿನ ಬಗ್ಗೆ ಸಚಿವರು ಬೇಜವಾಬ್ದಾರಿಯುತವಾದ ಹೇಳಿಕೆ ನೀಡಿದ್ದಾರೆ.