ಸ್ನೇಹದ ಹಸ್ತ ಚಾಚುವ ಮೂಲಕ 2019ರ ಲೋಕಸಭಾ ಚುನಾವಣೆಗೂ ಮುನ್ನ ಮೈತ್ರಿಗೆ ಸಿದ್ಧವಾಗಿದ್ದ ಬಿಜೆಪಿಗೆ ಶಿವಸೇನೆ ಶಾಕ್‌ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ ಎಂದು ಶಿವಸೇನೆ ಘೋಷಿಸಿದೆ. 

ಮುಂಬೈ: ಸ್ನೇಹದ ಹಸ್ತ ಚಾಚುವ ಮೂಲಕ 2019ರ ಲೋಕಸಭಾ ಚುನಾವಣೆಗೂ ಮುನ್ನ ಮೈತ್ರಿಗೆ ಸಿದ್ಧವಾಗಿದ್ದ ಬಿಜೆಪಿಗೆ ಶಿವಸೇನೆ ಶಾಕ್‌ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ ಎಂದು ಶಿವಸೇನೆ ಘೋಷಿಸಿದೆ. 

ಸಮರ್ಥನೆಗಾಗಿ ಸಂಪರ್ಕ ಅಭಿಯಾನದ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾಗುವುದಕ್ಕೂ ಮುನ್ನವೇ ಈ ಅಂಶವನ್ನು ಶಿವಸೇನೆ ಸ್ಪಷ್ಟಪಡಿಸಿದೆ. ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ ಈ ಅಂಶವನ್ನು ಸ್ಪಷ್ಟಪಡಿಸಿದೆ. ಈ ಮೂಲಕ ಸ್ನೇಹದ ಹಸ್ತ ಚಾಚಲು ಮುಂದಾಗಿದ್ದ ಬಿಜೆಪಿಗೆ ಶಾಕ್‌ ನೀಡಿದೆ.

ಈ ನಡುವೆ ಪೂರ್ವನಿಗದಿಯಂತೆ ಬುಧವಾರ ಸಂಜೆ ಅಮಿತ್‌ ಶಾ ಅವರು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರನ್ನು ಭೇಟಿ ಮಾಡಿ ಮೋದಿ ಸರ್ಕಾರದ 4 ವರ್ಷಗಳ ಸಾಧನೆ ಬಗ್ಗೆ ಮನವರಿಕೆ ಮಾಡಿಕೊಡುವ ಯತ್ನ ನಡೆಸಿದರು.

ಇದಕ್ಕೂ ಮೊದಲು ಶಾ, ಉದ್ಯಮಿ ರತನ್‌ ಟಾಟಾ ಮತ್ತು ನಟಿ ಮಾಧುರಿ ದೀಕ್ಷಿತ್‌ ಅವರನ್ನು ಭೇಟಿಯಾಗಿ ಸರ್ಕಾರದ ಸಾಧನೆಯ ಮಾಹಿತಿ ನೀಡಿದರು. ಆದರೆ ಲತಾ ಮಂಗೇಶ್ಕರ್‌ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅವರೊಂದಿಗೆ ಭೇಟಿ ಸಾಧ್ಯವಾಗಲಿಲ್ಲ.

ಶಾ ಗುರುವಾರ ಅಕಾಲಿದಳದ ಅಧ್ಯಕ್ಷ ಪ್ರಕಾಶ್‌ಸಿಂಗ್‌ ಬಾದಲ್‌ ಅವರನ್ನೂ ಅಮಿತ್‌ ಶಾ ಭೇಟಿ ಮಾಡಿ ಸರ್ಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ.