ಮಂಡ್ಯ: ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡ ಅವರು ಕನಿಷ್ಠ 6 - 7 ಲಕ್ಷ ಬಹು ಮತದಿಂದ ಆಯ್ಕೆಯಾಗುತ್ತಾರೆ. 

ಇದು ನನ್ನ ಲೆಕ್ಕಾಚಾರ ಎಂದು ಸಚಿವ ಜಮೀರ್ ಅಹಮದ್ ಖಾನ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಡ್ಯದಲ್ಲಿ ಬಿಜೆಪಿ ಮತ ಗಳಿಕೆ 1 ಲಕ್ಷವನ್ನೂ ದಾಟಲ್ಲ ಎಂದು ತಿಳಿಸಿದರು. 

ಸಂಹಿತೆ ಉಲ್ಲಂಘನೆ?: ಅಪಘಾತದಲ್ಲಿ ಮೃತಪಟ್ಟ ಮುಸ್ಲಿಂ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಜಮೀರ್ ಅವರು ಮಂಡ್ಯದಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ 3 ಲಕ್ಷ ರು. ನೆರವು ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಕಳೆದ ವಾರ ಮಂಡ್ಯಕ್ಕೆ ಭೇಟಿ
ನೀಡಿದ್ದಾಗ ಸಚಿವರು ಧನಸಹಾಯ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.