ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರೋ ದೀಪಿಕಾ ಪಡುಕೋಣೆ ಅಭಿನಯದ  ಪದ್ಮಾವತಿ ಚಿತ್ರದ ಪರ ನಟ ಶಿವರಾಜ್​ ಕುಮಾರ್ ಬ್ಯಾಟಿಂಗ್ ಮಾಡಿದ್ದಾರೆ. 

ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರೋ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದ ಪರ ನಟ ಶಿವರಾಜ್​ ಕುಮಾರ್ ಬ್ಯಾಟಿಂಗ್ ಮಾಡಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಶಿವಣ್ಣ. ಕಲಾವಿದರನ್ನ ಟಾರ್ಗೆಟ್ ಮಾಡಬಾರದು. ರಿಲೀಸ್ ಗೂ ಮೊದಲು ಚಿತ್ರದ ಬಗ್ಗೆ ನಿರ್ಧಾರ ಮಾಡೋದು ಸರಿಯಲ್ಲ . ಈ ರೀತಿ ಮಾಡೋದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ರು.

ದೀಪಿಕಾ ಅಭಿನಯ ಅದ್ಭುತ ಅನಿಸುತ್ತೆ , ಸಂಜಯ್ ಲೀಲಾ ಬನ್ಸಾಲಿ ಒಳ್ಳೆ ಸಿನಿಮಾ ಮಾಡಿರ್ತಾರೆ ಅನ್ನೋ ನಂಬಿಕೆ ಇದೆ ಅಂತ ಶಿವಣ್ಣ ಹೇಳಿದ್ದಾರೆ.