ಶಿವಮೊಗ್ಗ(ಮೇ.22 )  ನಟ ಕಮಲಹಾಸನ್‌ ಹೇಳಿಕೆ ಮತ್ತದರ ಬೆನ್ನಲ್ಲೆ ನಡೆದ ಘಟನೆಯ ಕುರಿತು ಪ್ರತಿಕ್ರಿಯೆ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ರಿಪ್ಪನ್‌ಪೇಟೆಯ ಕೃಷ್ಣಪ್ಪ ಏಕಾಏಕಿ ತಾವು ತೊಟ್ಟಿದ್ದ ಚಪ್ಪಲಿ ತೆಗೆದುಕೊಂಡು ತಮಗೆ ತಾವೇ ಹೊಡೆದುಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆಯಲ್ಲಿ ಅನಿರೀಕ್ಷಿತವಾಗಿ ನಡೆದ ಘಟನೆಯಿಂದಾಗಿ ಒಂದು ಕ್ಷಣ ಪತ್ರಕರ್ತರೂ ಆವಕ್ಕಾದರು. ಇಂತಹ ಕೃತ್ಯ ಇಲ್ಲಿ ಬೇಕಿತ್ತೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೂ ತಪ್ಪಾಗಿ ಭಾವಿಸಬಾರದು. ಚಪ್ಪಲಿ ಎಂಬುದು ಕನಿಷ್ಠವಲ್ಲ ಎಂಬುದನ್ನು ತೋರಿಸಲಿಕ್ಕಾಗಿ ತಾವು ಈ ರೀತಿ ಮಾಡಿರುವುದಾಗಿ ಹೇಳಿಕೊಂಡರು. ಚಪ್ಪಲಿ ನಮ್ಮ ರಕ್ಷಣೆಗಾಗಿ ಇರುವುದು. ಅದು ಕನಿಷ್ಠವಲ್ಲ ಎಂದರು.

Exit Polls 2019: ಮಾಜಿ ಸಿಎಂ ಪುತ್ರರ ಜಂಗಿ ಕುಸ್ತಿಯಲ್ಲಿ ಜಯ ಯಾರದ್ದು?

ಗಾಂಧಿ ಹಂತಕ ನಾಥೂರಾಂಗೋಡ್ಸೆ ಓರ್ವ ಹಿಂದೂ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದ ನಟ ಕಮಲಹಾಸನ್‌ಗೆ ಚಪ್ಪಲಿ ತೂರಿದ್ದರಿಂದ ಅವರು ವಿಚಲಿತರಾಗಬೇಕಿಲ್ಲ ಎಂದ ಅವರು ಕಮಲಹಾಸನ್‌ ಹೇಳಿದ್ದರಲ್ಲಿ ತಪ್ಪೇನಿಲ್ಲ? ಎಲ್ಲರಿಗೂ ವಾಕ್‌ ಸ್ವಾತಂತ್ರ್ಯವಿದೆ. ಆದರೆ ಕಮಲಹಾಸನ್‌ ಹಿಂದೂ ಎಂದು ಹೇಳಬೇಕಾಗಿರಲಿಲ್ಲ. ಗೂಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಎಂಬುದು ಸರಿ ಎಂದರು.

ಕಾವಿತೊಟ್ಟವರು ತಪ್ಪು ಮಾಡಬಾರದು ಹಾಗೂ ಸಮಾಜಕ್ಕೆ ವಿರುದ್ಧವಾಗಿ ವರ್ತಿಸಬಾರದು. ಸಾಧ್ವಿ ಪ್ರಜ್ಞಾಸಿಂಗ್‌ ಅವರು ನಾಥೂರಾಂ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ಕೊಟ್ಟಿರುವುದು ತಪ್ಪು. ಆದರೆ ನಂತರ ಅವರು ಈ ಬಗ್ಗೆ ಕ್ಷಮೆ ಯಾಚಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.