ಬೆಂಗಳೂರು : ಶಿವಮೊಗ್ಗ ಕ್ಷೇತ್ರದ ನೂತನ ಸಂಸದರಾದ ಬಿ.ವೈ ರಾಘವೇಂದ್ರ ಇಂದು ಕೈ ನಾಯಕ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. 

ಬೆಂಗಳೂರಿನಲ್ಲಿ ಡಿಕೆಶಿ ಭೇಟಿ ಮಾಡಿದ ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಘೋಷಣೆಯಾದ ಒಟ್ಟು 6 ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಕೋರಿದರು. 

ಅಗತ್ಯ ಅನುದಾನ ಬಿಡುಗಡೆ ಜೊತೆಗೆ ಕೂಡಲೇ ಟೆಂಡರ್ ಗೆ ಆಹ್ವಾನಿಸಿ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಡಿ.ಕೆ.ಶಿವಕುಮಾರ್ ಬಳಿ ರಾಘವೇಂದ್ರ ಮನವಿ ಮಾಡಿದರು.