ಶಿವಮೊಗ್ಗ ಕುಂಸಿ ಮೂಲದ ರೂಪೇಶ್(17) ಮೃತ ಬಾಲಕ. ಘಟನೆ ಸಂಬಂಧ ನಿರ್ಲಕ್ಷ್ಯ ಹಾಗೂ ಅಪ್ರಾಪ್ತನನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ಆರೋಪದಡಿ ಹೋಟೆಲ್ ಮಾಲೀಕ ಮಂಜುನಾಥ್ ಮತ್ತು ವ್ಯವಸ್ಥಾಪಕ ಲೋಕೇಶ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು[ಅ.30]: ತೆಂಗಿನಕಾಯಿ ತುರಿಯುವ ಯಂತ್ರಕ್ಕೆ ಸಿಲುಕಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಗಾಂಧಿನಗರದ ಚಾಮುಂಡೇಶ್ವರಿ ಮಿಲ್ಟ್ರೀ ಹೋಟೆಲ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಶಿವಮೊಗ್ಗ ಕುಂಸಿ ಮೂಲದ ರೂಪೇಶ್(17) ಮೃತ ಬಾಲಕ. ಘಟನೆ ಸಂಬಂಧ ನಿರ್ಲಕ್ಷ್ಯ ಹಾಗೂ ಅಪ್ರಾಪ್ತನನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ಆರೋಪದಡಿ ಹೋಟೆಲ್ ಮಾಲೀಕ ಮಂಜುನಾಥ್ ಮತ್ತು ವ್ಯವಸ್ಥಾಪಕ ಲೋಕೇಶ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಶಿವಮೊಗ್ಗದ ರೂಪೇಶ್ 25 ದಿನಗಳ ಹಿಂದೆ ಮನೆ ಬಿಟ್ಟು ನಗರಕ್ಕೆ ಬಂದಿದ್ದ. ಚಾಮುಂಡೇಶ್ವರಿ ಮಿಲ್ಟ್ರೀ ಹೋಟೆಲ್‌ನಲ್ಲಿ ಮಾಸಿಕ ಏಳು ಸಾವಿರ ವೇತನಕ್ಕೆ ಕೆಲಸಕ್ಕೆ ಸೇರಿದ್ದ. ಅಕ್ಕಿ ಹಿಟ್ಟು ಹಾಗೂ ತೆಂಗಿನಕಾಯಿ ತುರಿಯುವ ಕೆಲಸವನ್ನು ಒಂದೇ ಯಂತ್ರದಲ್ಲಿ ಮಾಡಲಾಗಿತ್ತು. ಭಾನುವಾರ ರಾತ್ರಿ ರೂಪೇಶ್ ತೆಂಗಿನಕಾಯಿ ತುರಿಯುವಾಗ ಯಂತ್ರಕ್ಕೆ ಈತನ ಬಟ್ಟೆ ಸಿಲುಕಿಕೊಂಡಿದ್ದು, ಜೋರಾಗಿ ಚೀರಿಕೊಂಡಿದ್ದಾನೆ. ಶಬ್ದ ಕೇಳಿ ಇತರೆ ಹೋಟೆಲ್ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ರೂಪೇಶ್ ಯಂತ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದ ಎಂದು ಪೊಲೀಸರು ಹೇಳಿದರು.
