ಇದೇ ವೇಳೆ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಕೂಡಾ ಕೋವಿಂದ್‌ರನ್ನು ಬೆಂಬಲಿಸಿದ್ದಾರೆ.
ನವದೆಹಲಿ(ಜೂ.21): ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ಗೆ ಶಿವಸೇನೆ ಕೂಡಾ ಬೆಂಬಲ ವ್ಯಕ್ತಪಡಿಸಿದೆ. ಮಂಗಳವಾರ ಇಲ್ಲಿ ನಡೆದ ಪಕ್ಷದ ಶಾಸಕರ ಸಭೆ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ. ಗೋವಿಂದ್ ಉತ್ತಮ ವ್ಯಕ್ತಿತ್ವ ಹೊಂದಿದ್ದಾರೆ. ದಮನಿತರ ಪರ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಇದೇ ವೇಳೆ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಕೂಡಾ ಕೋವಿಂದ್ರನ್ನು ಬೆಂಬಲಿಸಿದ್ದಾರೆ. ‘ರಾಷ್ಟ್ರಪತಿ ಹುದ್ದೆಗೆ ರಾಮನಾಥ್ ಕೋವಿಂದ್ ಒಳ್ಳೆಯ ಅಭ್ಯರ್ಥಿ. ಅವರ ಜತೆ ನನಗೆ ಹಳೇ ಬಾಂಧವ್ಯವಿದೆ. ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಬಿಜೆಪಿಗೆ ಬಹುಮತವಿರುವುದು ಮುಖ್ಯವಾದ ಅಂಶವಾಗಿದ್ದು, ವಿಪಕ್ಷಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತವೆ ಎಂಬುದು ಹೇಳಲು ಅಸಾಧ್ಯ,’ ಎಂದಿದ್ದಾರೆ.
