ಕಳೆದ ವಾರ ಆಸನದ ದರ್ಜೆಗೆ ಸಂಬಂಧಿಸಿ ನಡೆದ ವಾಗ್ವಾದದಲ್ಲಿ ಗಾಯಕ್ವಾಡ್ ಏರ್ ಇಂಡಿಯಾ ಅಧಿಕಾರಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು. ಬಳಿಕ ವಿಮಾನಗಳಲ್ಲಿ ಪ್ರಯಾಣಿಸದಂತೆ ಅವರಿಗೆ ಏಳು ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿವೆ.

ಉಸ್ಮಾನಬಾದ್ (ಮಾ.28): ಏರ್ ಇಂಡಿಯಾ ಅಧಿಕಾರಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾಗಿರುವ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಕಾರಿನಲ್ಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಸಂಸತ್ತು ಅಧಿವೇಶನದಲ್ಲಿ ಭಾಗವಹಿಸಲು ಗಾಯಾಕ್ವಾಡ್ ಕಾರಿನಲ್ಲೇ ಪ್ರಯಾಣ ಬೆಳೆಸಿದ್ದಾರೆ, ಇಂದು ದೆಹಲಿಗೆ ತಲುಪಲಿದ್ದಾರೆ, ಎಂದು ಅವರ ಆಪ್ತಮೂಲಗಳು ತಿಳಿಸಿವೆಯೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪಕ್ಷದ ನಾಯಕರು ಅನುಮತಿಸಿದರೆ ನಾಳೆ ಗಾಯಕ್ವಾಡ್ ಲೋಕಸಭೆ ಕಲಾಪಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಹೈದರಾಬಾದಿನಿಂದ ದೆಹಲಿಗೆ ತೆರಳಲು ಗಾಯಕ್ವಾಡ್ ಕಾದಿರಿಸದ್ದ ಸೀಟನ್ನು ಏರ್ ಇಂಡಿಯಾ ರದ್ದುಗೊಳಿಸಿತ್ತು.

ಕಳೆದ ವಾರ ಆಸನದ ದರ್ಜೆಗೆ ಸಂಬಂಧಿಸಿ ನಡೆದ ವಾಗ್ವಾದದಲ್ಲಿ ಗಾಯಕ್ವಾಡ್ ಏರ್ ಇಂಡಿಯಾ ಅಧಿಕಾರಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು. ಬಳಿಕ ವಿಮಾನಗಳಲ್ಲಿ ಪ್ರಯಾಣಿಸದಂತೆ ಅವರಿಗೆ ಏಳು ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿವೆ.