ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ ಶಿವಸೇನೆ ಸಂಸದ ರವೀಂದ್ರ ಗಾಯಕ್ ವಾಡ್ ಗೆ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ ಲೈನ್ಸ್ ಫೆಡರೇಶನ್ ತಮ್ಮ ವಿಮಾನದಲ್ಲಿ ಪ್ರಯಾಣಿಸದಂತೆ ನಿಷೇಧ ಹೇರಿದೆ.

ನವದೆಹಲಿ (ಮಾ.24): ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ ಶಿವಸೇನೆ ಸಂಸದ ರವೀಂದ್ರ ಗಾಯಕ್ ವಾಡ್ ಗೆ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ ಲೈನ್ಸ್ ಫೆಡರೇಶನ್ ತಮ್ಮ ವಿಮಾನದಲ್ಲಿ ಪ್ರಯಾಣಿಸದಂತೆ ನಿಷೇಧ ಹೇರಿದೆ.

ದೆಹಲಿಯಿಂದ ಪುಣೆಗೆ ವಾಪಸ್ಸಾಗಲು ಇಂದು 4 ಗಂಟೆಗೆ ಕಾಯ್ದಿರಿಸಲಾಗಿದ್ದ ಟಿಕೆಟನ್ನು ಕೂಡಾ ಏರ್ ಇಂಡಿಯಾ ರದ್ದುಗೊಳಿಸಲಾಗಿದೆ. ಹಾಗಾಗಿ ಪುಣೆಗೆ ವಾಪಸ್ಸಾಗಲು ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಲಿದ್ದಾರೆ.

ಏರ್ ಇಂಡಿಯಾ ಮತ್ತು ಫೆಡರೇಶನ್ ಆಫ್ ಇಂಡಿಯನ್ ಏರ್ ಲೈನ್ಸ್ ತಮ್ಮ ವಿಮಾನಗಳಲ್ಲಿ ರವೀಂದ್ರ ಗಾಯಕ್ ವಾಡ್ ಪ್ರಯಾಣಿಸಲು ನಿಷೇಧ ಹೇರಲು ಈ ಕೂಡಲೇ ನಿರ್ಧರಿಸಿದೆ.

ಈ ಘಟನೆಯ ಬಗ್ಗೆ ಗಾಯಕ್ ವಾಡ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಉದ್ಯೋಗಿಗಳ ನೈತಿಕ ಸ್ಥೈರ್ಯ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಬೇಕು ಎಂದು ಏರ್ ಇಂಡಿಯಾ ಹೇಳಿದೆ.