ಶಿರಾಡಿ ಘಾಟ್ ಇನ್ನು ಸಂಚಾರ ಮುಕ್ತ

First Published 1, Aug 2018, 9:47 AM IST
Shiradi Ghat to be opene tomorrow
Highlights

ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಆಗಸ್ಟ್ 2 ರಿಂದ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಮಂಗಳೂರು: ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಆ.2 ರಿಂದ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಮಳೆಗಾಲಕ್ಕೂ ಮುನ್ನ ಬಂದ್ ಆಗಿದ್ದ ಈ ಮಾರ್ಗದಲ್ಲಿ ಹದಿನೈದು ದಿನಗಳ ಹಿಂದೆ ಕಾರು, ಬಸ್ ಹಾಗೂ ಲಘ ಸರಕುವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. 

ಆದರೆ, ಗುರುವಾರದಿಂದ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಈ ಘಾಟ್ ರಸ್ತೆ ಸಂಪೂರ್ಣವಾಗಿ ತೆರೆದುಕೊಳ್ಳಲಿದೆ. ಎರಡನೇ ಹಂತದ ಕಾಂಕ್ರೀಟ್ ಕಾಮಗಾರಿ ಹಿನ್ನೆಲೆಯಲ್ಲಿ ಈ ಘಾಟ್‌ನಲ್ಲಿ ಆರು ತಿಂಗಳು ವಾಹನ ಸಂಚಾರ ಬಂದ್ ಮಾಡಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಶೋಲ್ಡರ್ಸ್(ರಸ್ತೆಯ ಅಂಚಿಗೆ ಸಮಾನಾಂತರ ಕಲ್ಲು ಮತ್ತು ಮಣ್ಣು ಹಾಕುವುದು) ಮತ್ತು ತಡೆಗೋಡೆ ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ಘನಸಂಚಾರ ನಿರ್ಬಂಧಿಸಲಾಗಿತ್ತು. 
 

loader