ಬೆಂಗಳೂರು (ಸೆ.30): ಆನೇಕಲ್ ನ ಜೆಡಿಎಸ್ ಎಂಎಲ್ಸಿ ಸಿ.ಆರ್. ಮನೋಹರ್ ವಿರುದ್ದ ಜಗದೀಶ್ ಶೆಟ್ಟರ್ ಭೂ ಅಕ್ರಮ ಆರೋಪ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮನೋಹರ್, ಪ್ರಕರಣ ಕುರಿತು ಸಂಪೂರ್ಣ ದಾಖಲೆಗಳ ಮಾಹಿತಿ ಪಡೆದು ಶೆಟ್ಟರ್ ಆರೋಪ ಮಾಡಲಿ.ಅವರಿಗೆ ಮಾಹಿತಿ ಕೊರತೆ ಇದೆ. ಬೇಕಿದ್ದರೆ ನಾನೇ ಖುದ್ದು ದಾಖಲೆಗಳನ್ನು ಅವರಿಗೆ ಒದಗಿಸುತ್ತೇನೆ ಎಂದು ಹೇಳಿದ್ದಾರೆ.
ನಂತರವೂ ರಾಜಕೀಯ ಕಾರಣಗಳಿಗೆ ಈ ವಿಷಯವನ್ನು ಬೆಳೆಸಿದರೆ ಮಾನನಷ್ಡ ಮೊಕದ್ದಮೆ ದಾಖಲಿಸುತ್ತೇನೆ. ಡಿಸಿ ಶಂಕರ್ ಅವರೇ ಕ್ಲೀನ್ ಚಿಟ್ ನೀಡಿದ್ದಾರೆ. ಸಿಬಿಐ ತನಿಖೆ ಎದುರಿಸಲೂ ಸಿದ್ಧ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಪ್ರಕರಣದಲ್ಲಿ ಅಕ್ರಮವೆಸಗಿರುವ ಕುರಿತು ನನ್ನ ವಿರುದ್ಧ ದಾಖಲೆಯಿದ್ರೆ ಬಿಡುಗಡೆಗೊಳಿಸಲಿ. ಗೌರವ ಸ್ಥಾನದಲ್ಲಿರುವ ಶೆಟ್ಟರ್ ಈ ರೀತಿ ಶಾಸಕರೊಬ್ಬರ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ
ಕಾನೂನು ಪ್ರಕಾರ ಜಮೀನು ಖರೀದಿಸಿದ್ದೇನೆ ಎಂದು ಮನೋಹರ್ ಹೇಳಿದ್ದಾರೆ.
