24ನೇ ಬಾರಿಗೆ ಎವರೆಸ್ಟ್ ತನ್ನ ವಿಶ್ವದಾಖಲೆ ತಾನೇ ಮುರಿದ ನೇಪಾಳಿ ಶೆರ್ಪಾ
ಕಟ್ಮಂಡು[ಮೇ.22]: ವಿಶ್ವದ ಅತ್ಯಂತ ಎತ್ತರದ ಹಿಮಚ್ಛಾಧಿತ ಪರ್ವತ ಮೌಂಟ್ ಎವರೆಸ್ಟ್‌ನ್ನು ಕಳೆದ ವಾರವಷ್ಟೇ 23ನೇ ಬಾರಿಗೆ ಹತ್ತಿ ವಿಶ್ವದಾಖಲೆ ಮಾಡಿದ್ದ ನೇಪಾಳದ ‘ಕಮಿ ರಿತಾ ಶೆರ್ಪಾ’ ಮಂಗಳವಾರ 24 ಬಾರಿ ಮತ್ತೆ ಹತ್ತುವ ಮೂಲಕ ಈ ಹಿಂದಿನ ತಮ್ಮದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಮಾಡಿದ್ದಾರೆ.
ಅವರು ಈ ಬಾರಿ ಪೊಲೀಸರ ತಂಡವೊಂದನ್ನು ಎವರೆಸ್ಟ್‌ಗೆ ಕರೆದೊಯ್ದಿದ್ದರು. ಕಳೆದ ಎರಡು ದಶಕಗಳಿಂದ ಪರ್ವತಾರೋಹಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿರುವ ಕಮಿ ರಿತಾ ಶೆರ್ಪಾ 1994ರಲ್ಲಿ 8,848 ಮೀಟರ್ (29,029 ಅಡಿ) ಎತ್ತರದ ಏರಿ ಮೊದಲ ಬಾರಿಗೆ ಸಾಧನೆ ತೋರಿದ್ದರು.
