ಸರ್ಕಾರಿ ಗೌರವಗಳೊಂದಿಗೆ ಶೀಲಾ ದೀಕ್ಷಿತ್ ಅಂತ್ಯಕ್ರಿಯೆ| ದೆಹಲಿಯ ನಿಗಂ ಬೋಧ್ ಘಾಟ್’ನಲ್ಲಿ ಅಂತ್ಯಸಂಸ್ಕಾರ| ಹಿರಿಯ ನಾಯಕಿಗೆ ಸಾವಿರಾರು ಜನರಿಂದ ಅಂತಿನ ನಮನ| ಎರಡು ದಿನಗಳ ಶೋಕಾಚರಣೆಗೆ ದೆಹಲಿ ಸರ್ಕಾರ ಘೋಷಣೆ|
ನವದೆಹಲಿ(ಜು.21): ಸಕಲ ಸರ್ಕಾರಿ ಗೌರವಗಳೊಂದಿಗೆ ಹಿರಿಯ ಕಾಂಗ್ರೆಸ್ ನಾಯಕಿ, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ಅಂತ್ಯಸಂಸ್ಕಾರ ನೆರವೇರಿತು.
ದೆಹಲಿಯ ನಿಗಂ ಬೋಧ್ ಘಾಟ್’ನಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ ಹಿರಿಯ ನಾಯಕರಿಗೆ ಅಂತಿಮ ನಮನ ಸಲ್ಲಿಸಿತು.
Scroll to load tweet…
ಇನ್ನು ಶೀಲಾ ದೀಕ್ಷಿತ್ ನಿಧನದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಎರಡು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ.
