Asianet Suvarna News Asianet Suvarna News

ವಾಟರ್ ಟ್ಯಾಂಕ್ ಹಗರಣ ಆರೋಪವನ್ನು ತಳ್ಳಿ ಹಾಕಿದ ಶೀಲಾ ದೀಕ್ಷಿತ್

ಶೀಲಾ ದೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ 400 ಕೋಟಿ ಟ್ಯಾಂಕರ್ ಹಗರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರುವುದನ್ನು ಶೀಲಾ ದೀಕ್ಷಿತ್ ತಳ್ಳಿ ಹಾಕಿದ್ದಾರೆ.

Sheela Dekshith Denies Connection With Water Tank Scam

ನವದೆಹಲಿ (ಮೇ.09): ಶೀಲಾ ದೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ 400 ಕೋಟಿ ಟ್ಯಾಂಕರ್ ಹಗರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರುವುದನ್ನು ಶೀಲಾ ದೀಕ್ಷಿತ್ ತಳ್ಳಿ ಹಾಕಿದ್ದಾರೆ.

ಈ ವಿಚಾರದಲ್ಲಿ ನನ್ನ ಹೆಸರನ್ನು ಯಾಕೆ ತರುತ್ತಿದ್ದಾರೆ ನನಗರ್ಥವಾಗುತ್ತಿಲ್ಲ. ಇದು ಆಮ್ ಆದ್ಮಿ ಪಕ್ಷದ ಆಂತರಿಕ ವಿಚಾರ. ಅದನ್ನು ಅವರೇ ಕುಳಿತು ಬಗೆಹರಿಸಿಕೊಳ್ಳಬೇಕು.  ನಾವೇನೂ ಹೇಳುವುದಕ್ಕಿಲ್ಲ.  ನನ್ನ ಹೆಸರನ್ನು ಯಾಕೆ ಬಳಸಿಕೊಳ್ಳುತ್ತಿದ್ದಾರೆ ನನಗರ್ಥವಾಗುತ್ತಿಲ್ಲವೆಂದು ಶೀಲಾ ದೀಕ್ಷಿತ್ ಹೇಳಿದ್ದಾರೆ.

ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 2012 ರಲ್ಲಿ ನಡೆದ ಹಗರಣವಿದು. ಆಗ ಶೀಲಾ ದೀಕ್ಷಿತ್ ದೆಹಲಿ ಜಲಮಂಡಳಿಯ ಅಧ್ಯಕ್ಷರೂ ಆಗಿದ್ದರು. ಖಾಸಗಿ ಕಂಪನಿಗಳಿಂದ 385 ಸ್ಟೇನ್ ಲೆಸ್ ಸ್ಟೀಲ್ ಟ್ಯಾಂಕರ್ ಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿತ್ತು. ಈ ಸಂಬಂಧ 2016 ರಲ್ಲಿ ಎಫ್ ಐಆರ್’ನ್ನು ದಾಖಲಿಸಲಾಗಿತ್ತು.

Follow Us:
Download App:
  • android
  • ios