ಕರ್ತವ್ಯದ ಸ್ಥಳದಲ್ಲಿನ ಲೈಂಗಿಕ ಕಿರುಕುಳ ಕುರಿತು ಆನ್‌ಲೈನ್‌ನಲ್ಲೇ ದೂರು ನೀಡಲು ಅನುವು ಮಾಡಿಕೊಡುವ ಶೀ ಬಾಕ್ಸ್ (Sexual Harassment Electronics Box ) ವ್ವವಸ್ಥೆಗೆ ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿದೆ.
ನವದೆಹಲಿ: ಕರ್ತವ್ಯದ ಸ್ಥಳದಲ್ಲಿನ ಲೈಂಗಿಕ ಕಿರುಕುಳ ಕುರಿತು ಆನ್ಲೈನ್ನಲ್ಲೇ ದೂರು ನೀಡಲು ಅನುವು ಮಾಡಿಕೊಡುವ ಶೀ ಬಾಕ್ಸ್ (Sexual Harassment Electronics Box ) ವ್ವವಸ್ಥೆಗೆ ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವೆಬ್ಸೈಟ್ನಲ್ಲಿ ಈ ದೂರು ಸಲ್ಲಿಸ ಬಹುದು.
ದೂರು ಸಲ್ಲಿಸಿದ ಮಹಿಳೆ ಕಾರ್ಯ ನಿರ್ವಹಿಸುವ ಸಂಸ್ಥೆಗೆ ರವಾನಿಸಲಿದೆ. ಸಂಸ್ಥೆಯಲ್ಲಿ ಲೈಂಗಿಕ ಕಿರುಕುಳ ದೂರು ವಿಚಾರಣೆಗೆಂದೇ ರಚಿಸಲಾಗಿರುವ ಆಂತರಿಕ ಸಮಿತಿ ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿರುತ್ತದೆ.
