ಪಾಟ್ನಾ : ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಅವರಿಗೆ ನೀಡಲಾಗಿದ್ದ ವಿಐಪಿ  ಸ್ಥಾನಮಾನವನ್ನು  ಹಿಂದಕ್ಕೆ ಪಡೆಯಲಾಗಿದೆ ಎಂದು ಪಾಟ್ನಾ ಏರ್ ಪೋರ್ಟ್  ಅಧಿಕಾರಿಗಳು ಹೇಳಿದ್ದಾರೆ. 

ಜಯಪ್ರಕಾಶ್ ನಾರಾಯಣ್  ವಿಮಾನ ನಿಲ್ದಾಣದ ನಿರ್ದೇಶಕರಾದ ರಾಜೇಂದ್ರ  ಸಿಂಗ್ ಲಹೌರಿಯಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ವಾಪಸ್ ಪಡೆಯಲಾಗುತ್ತದೆ. ಅಲ್ಲದೇ ಬೋರ್ಡಿಂಗ್ ಪಾಸ್ ಗೆ ಸರತಿ  ಸಾಲಿನಲ್ಲಿ ನಿಲ್ಲುವುದರಿಂದಲೂ ಅವರಿಗೆ ವಿನಾಯಿತಿ ಇರುವುದಿಲ್ಲ. ಅವರ ವಾಹನಕ್ಕೂ ಕೂಡ ಭದ್ರತಾ ತಪಾಸಣೆಯಿಂದ ವಿನಾಯಿತಿ ನೀಡಲಾಗುವುದಿಲ್ಲ. 

ಜೂನ್ ತಿಂಗಳಲ್ಲಿಯೇ ಅವರಿಗೆ ನೀಡುತ್ತಿದ್ದ ಭದ್ರತಾ ಸ್ಥಾನಮಾನ ಅವಧಿ ಮುಕ್ತಾಯವಾಗಿದೆ. ವಿಐಪಿ ಸ್ಥಾನ ಮಾನ ಮುಂದುವರಿಸಲು ಯಾವುದೇ ಆದೇಶವೂ ಬಂದಿಲ್ಲ ಎಂದು ಲಹೌರಿಯಾ ಹೇಳಿದ್ದಾರೆ.