Floccinaucinihilipilification ಪದ ಉಚ್ಛರಿಸಿದ ಪುಟ್ಟ ಕಂದ! ಮಗುವಿನ ಉಚ್ಛಾರಣೆಗೆ ಫಿದಾ ಆದ ಶಶಿ ತರೂರ್! ಸಾಮಾಜಿಕ ಜಾಲತಣದಲ್ಲಿ ಹರಿದಾಡುತ್ತಿದೆ ಹೊಸ ಚಾಲೆಂಜ್! ಮಗುವಿನ ವಿಡಿಯೋ ಮೆಚ್ಚಿಕೊಂಡ ಕಾಂಗ್ರೆಸ್ ನಾಯಕ ತರೂರ್
ನವದೆಹಲಿ(ಅ.13):‘Floccinaucinihilipilification’ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ಕೇಳಿ ಬರುತ್ತಿರುವ ಶಬ್ಧ. ಕಾಂಗ್ರೆಸ್ ಸಂಸದ ಶಶಿ ತರೂರ್ ಇತ್ತೀಚಿಗೆ ತಮ್ಮ ಹೊಸ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಈ ಪದ ಪ್ರಯೋಗ ಮಾಡಿದ್ದರು.
ಅದರಂತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ Floccinaucinihilipilification ಪದದ ಸರಿಯಾದ ಉಚ್ಛಾರಣೆ ಕುರಿತಾದ ಚಾಲೆಂಜ್ ಹರಿದಾಡುತ್ತಿದೆ. ಅಬಾಲವೃದ್ಧರಾದಿಯಾಗಿ ಎಲ್ಲರೂ ಈ ಚಾಲೆಂಜ್ ನಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಯಾರಿದಂಲೂ ಇದುವರೆಗೂ Floccinaucinihilipilification ಪದದ ಸರಿಯಾದ ಉಚ್ಛಾರಣೆ ಮಾಡಲಾಗಿಲ್ಲ.
ಆದರೆ ಚಿಕ್ಕ ಮಗುವೊಂದು Floccinaucinihilipilification ಪದದ ಉಚ್ಛಾರಣೆ ಮಾಡುತ್ತಿರುವ ವಿಡಿಯೋವೊಂದು ಟ್ವೀಟರ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಖುದ್ದು ಶಶಿ ತರೂರ್ ಈ ಮಗುವಿಗೆ ಶಹಬ್ಬಾಸಗಿರಿ ನೀಡಿದ್ದಾರೆ.
ಟ್ವೀಟರ್ ನಲ್ಲಿ ಟ್ರೆಂಡ್ ಆಗುತ್ತಿರುವ ಈ ಮಗುವಿನ ವಿಡಿಯೋವನ್ನು ಬಹುವಾಗಿ ಮೆಚ್ಚಿಕೊಂಡಿರುವ ತರೂರ್, ಈ ವಯಸ್ಸಿನಲ್ಲಿ ನನಗೆ ಇಂಗ್ಲೀಷ್ ಭಾಷೆಯೇ ಬರುತ್ತಿರಲಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
