ಶರದ್‌ ಯಾದವ್‌ ಬಣದಿಂದ ‘ಲೋಕತಾಂತ್ರಿಕ್‌ ಜನತಾ ದಳ’ ಸ್ಥಾಪನೆ

Sharad Yadav faction to form a new party
Highlights

ಮುಂದಿನ ವರ್ಷ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಹೊಸ ಪಕ್ಷಗಳ ಉದಯ ಆರಂಭವಾಗಿದೆ. ಈಗಾಗಲೇ ಬಿಹಾರ ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯುವಿನಿಂದ ವಿಭಜನೆಗೊಂಡು ಬಂಡಾಯ ಘೋಷಿಸಿದ್ದ ಶರದ್‌ ಯಾದವ್‌ ಬಣ ಗುರುವಾರ ಹೊಸ ಪಕ್ಷ ‘ಲೋಕತಾಂತ್ರಿಕ್‌ ಜನತಾ ದಳ’ (ಎಲ್‌ಜೆಡಿ) ರಚನೆಯ ಬಗ್ಗೆ ಘೋಷಿಸಿದೆ.

ನವದೆಹಲಿ: ಮುಂದಿನ ವರ್ಷ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಹೊಸ ಪಕ್ಷಗಳ ಉದಯ ಆರಂಭವಾಗಿದೆ. ಈಗಾಗಲೇ ಬಿಹಾರ ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯುವಿನಿಂದ ವಿಭಜನೆಗೊಂಡು ಬಂಡಾಯ ಘೋಷಿಸಿದ್ದ ಶರದ್‌ ಯಾದವ್‌ ಬಣ ಗುರುವಾರ ಹೊಸ ಪಕ್ಷ ‘ಲೋಕತಾಂತ್ರಿಕ್‌ ಜನತಾ ದಳ’ (ಎಲ್‌ಜೆಡಿ) ರಚನೆಯ ಬಗ್ಗೆ ಘೋಷಿಸಿದೆ.

ಪತ್ರಿಕಾಗೋಷ್ಠಿಯೊಂದರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸುಶೀಲಾ ಮೊರಾಲೆ, ನೂತನ ಪಕ್ಷ ರಚನೆಯ ಬಗ್ಗೆ ಘೋಷಿಸಿದರು.

ಈ ವೇಳೆ ಯಾದವ್‌ ಉಪಸ್ಥಿತರಿದ್ದರೂ, ತಾವಿನ್ನೂ ಹೊಸ ಪಕ್ಷದ ಸದಸ್ಯರಾಗಿಲ್ಲ ಎಂದು ಪ್ರತಿಪಾದಿಸಿದರು. ಆದರೆ ಎಲ್‌ಜೆಡಿಗೆ ತಮ್ಮ ಆಶೀರ್ವಾದ ಇದೆ ಎಂದು ಅವರು ತಿಳಿಸಿದರು. ಜೆಡಿಯು ಪ್ರತಿನಿಧಿತ್ವದ ಕುರಿತಂತೆ ಇನ್ನೂ ಕಾನೂನು ಹೋರಾಟ ಮುಂದುವರಿದಿರುವುದರಿಂದ ಅವರು ಈ ರೀತಿ ಹೇಳಿರಬಹುದು ಎನ್ನಲಾಗಿದೆ. ಮೇ 18ರಂದು ಹೊಸ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆಯಲಿದೆ.

loader